Thursday, November 30, 2023
Homeದೇಶಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ಉಚಿತ ಬೃಹತ್ ಆರೋಗ್ಯ ಶಿಬಿರ

ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ಉಚಿತ ಬೃಹತ್ ಆರೋಗ್ಯ ಶಿಬಿರ

ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ವೃಷಭಾವತಿ ನಗರ ವಾರ್ಡ್ ನ ಮಾರುತಿ ಶಾಲೆಯಲ್ಲಿ ಇಂದು ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ಉಚಿತ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರವನ್ನು ಮಾಜಿ ಸಚಿವರು ಹಾಗೂ ಜನಪ್ರಿಯ ಶಾಸಕರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ಉದ್ಘಾಟಿಸಿ ಶಿಬಿರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಗೋಪಾಲಯ್ಯ ರವರು ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಈ ಮಹಾನಗರದಲ್ಲಿ ಪ್ರತಿ ತಿಂಗಳು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಇಲ್ಲಿ ನುರಿತ ವೈದ್ಯರಿಂದ ತಪಾಸಣೆ ಚಿಕಿತ್ಸೆ ಹಾಗೂ ಉಚಿತವಾಗಿ ಔಷಧ ನೀಡಲಾಗುವುದು ತಾವೆಲ್ಲರೂ ಬಂದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಮಹಾಲಕ್ಷ್ಮೀ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ರಾದ ಜಯರಾಮಣ್ಣ, ಬಿಬಿಎಂಪಿ ಮಾಜಿ ಸದಸ್ಯರಾದ ನಾಗರತ್ನ ಲೋಕೇಶ್,ಹಿರಿಯ ವೈದ್ಯರಾದ ಡಾ,ಮಹೇಂದ್ರ, ಡಾ, ಪುಣ್ಯವತಿ ನಾಗರಾಜು, ಡಾ, ನಾಗೇಂದ್ರ ಡಾ, ಮಂಜುನಾಥ ಗೌಡ, ಸ್ಥಳೀಯ ಮುಖಂಡರುಗಳಾದ ಎನ್, ವೆಂಕಟೇಶ್, ವೆಂಕಟೇಶ್ ಮೂರ್ತಿ, ಸ್ವಾಮಿ, ಶಿವಾನಂದ್ ಮೂರ್ತಿ, ನಿಸರ್ಗ ಜಗದೀಶ್,ಸೇರಿದಂತೆ ಹಲವು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.


ವಿಶೇಷವಾಗಿ ಈ ಬಾರಿಯ ಶಿಬಿರದಲ್ಲಿ ಶಾಸಕ ಕೆ ಗೋಪಾಲಯ್ಯ ಅವರ ಸುಪುತ್ರ ರಾದ ಕೆ ಮಂಜುನಾಥ್ ಗೌಡರು ಅವರ ವೈದ್ಯಕೀಯ ಸೇವೆಯನ್ನು ಸಾರ್ವಜನಿಕವಾಗಿ ಆರಂಭಿಸಿದ್ದು, ಶಿಬಿರದ ಹೈಲೈಟ್ ಆಗಿತ್ತು.
ಈ ಶಿಬಿರದಲ್ಲಿ ಪುಣ್ಯ ಆಸ್ಪತ್ರೆ, ಮಾತೃ ಆಸ್ಪತ್ರೆ, ಮೋದಿ ಕಣ್ಣಿನ ಆಸ್ಪತ್ರೆ ಹಾಗೂ ಬಿಬಿಎಂಪಿ ಯ ನಮ್ಮ ಕ್ಲಿನಿಕ್ ಆಸ್ಪತ್ರೆಗಳ ಸಹಯೋಗದೊಂದಿಗೆ ಈ ಶಿಬಿರವನ್ನು ಆಯೋಜನೆ ಮಾಡಿದ್ದು, ಶಿಬಿರದಲ್ಲಿ ಬಿಪಿ ಶುಗರ್ ಇಸಿಜಿ ಥೈರಾಯ್ಡ್ ಕಣ್ಣಿನ ತಪಾಸಣೆ ಚಿಕಿತ್ಸೆ, ಮೂಳೆ ಏಕೋ ಲಿವರ್ ಫಂಕ್ಷನ್ ಮುಂತಾದ ಕಾಯಿಲೆಗಳಿಗೆ ಉಚಿತಾವಾಗಿ ನುರಿತ ವೈದ್ಯರಿಂದ ತಪಾಸಣೆ ಚಿಕಿತ್ಸೆ ಹಾಗೂ ಉಚಿತವಾಗಿ ಔಷಧ ಹಾಗೂ ಕನ್ನಡಕ ವಿತರಣೆ ಮಾಡಲಾಗುವುದು.
ಈ ಶಿಬಿರದಲ್ಲಿ ಸುಮಾರು 2000 ಸಾವಿರ ಜನಗಳು ಪಾಲ್ಗೊಂಡು ಚಿಕಿತ್ಸೆ ಪಡೆದರು.
ವಿಶೇಷವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾದವರು ಮೋದಿ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ಮಾಡಿಸಿ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು.

RELATED ARTICLES
- Advertisment -
Google search engine

Most Popular

Recent Comments