Friday, December 1, 2023
Homeದೇಶಆ.6 ರಂದು ಹಾಸನ ಆಕಾಶವಾಣಿಯಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಸಂದರ್ಶನ

ಆ.6 ರಂದು ಹಾಸನ ಆಕಾಶವಾಣಿಯಲ್ಲಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಸಂದರ್ಶನ

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಹಾಸನದ ಆಕಾಶವಾಣಿ ಸಂದರ್ಶನ ನಡೆಸಿದೆ.

ಹಾಸನದ ಜನಮಿತ್ರ ಪತ್ರಿಕೆಯಿಂದ ಹಿಡಿದು ಜನವಾಹಿನಿ, ವಿಜಯ ಕರ್ನಾಟಕ ಮತ್ತು ವಿಜಯವಾಣಿ ದಿನ ಪತ್ರಿಕೆ ತನಕ ಮೂರು ದಶಕಗಳ ಕಾಲ‌ ಪತ್ರಿಕೋದ್ಯಮ ಪಯಣದ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ತಗಡೂರು ಎಂಬ ಕುಗ್ರಾಮದ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದು, ಬೆಂಗಳೂರು ತನಕ ಹೋಗುವ ಹಾದಿಯಲ್ಲಿ ಅವರ ಹೋರಾಟದ ಹಾದಿಯ ಕಥನಗಳಿವೆ.

ಬಾಗೂರು-ನವಿಲೆ ರೈತರ ಹೋರಾಟವನ್ನು ಕಟ್ಟಿದ ಬಗೆ, ಸಾಕ್ಷರತಾ ಆಂದೋಲನದ ಸೇವೆ, ನಾಟಕ ರಂಗಭೂಮಿ ಪಯಣ, ರಾಜ್ಯ ಪತ್ರಕರ್ತರ ಸಂಘದ ಚುಕ್ಕಾಣಿ ಹಿಡಿದು
ನಾಡಿನ ಉದ್ದಗಲಕ್ಕೂ ದಣಿವರಿಯದ ಟೈಮ್ ಟ್ರಾವಲರ್ ಆದದ್ದು ಸಾಧನೆಯ ಹಾದಿಯಲ್ಲಿ ಮಹತ್ವದ ಮೈಲುಗಲ್ಲು. ಹಾಗೆಯೇ ಪತ್ರಕರ್ತರ ಸಂಘಟನೆಗೆ ಹೊಸತನ ನೀಡುವ ನಿಟ್ಟಿನಲ್ಲಿ ದುಡಿಮೆಯ ಹಿರಿಮೆ ದೊಡ್ಡದು… ಹೀಗೆ ನಾನಾ ಘಟಕಗಳ ನೆನಪಿನ ಬುತ್ತಿಯ ಸುರಳಿ ಆಕಾಶವಾಣಿ ಸಂದರ್ಶನದಲ್ಲಿ ಮೂಡಿ ಬಂದಿದೆ.

ಶಿವಾನಂದ ತಗಡೂರು ಅವರನ್ನು ಡಿ.ಜಿ.ರಮೇಶ್ ಅವರು ಸಂದರ್ಶನ ನಡೆಸಿದ್ದಾರೆ. ಅದರ ಮೊದಲ ಭಾಗ ಭಾನುವಾರ ಆ.6 ರಂದು ಸಂಜೆ 5 ಗಂಟೆಗೆ
(FM 102.2 ಮೆಗಾಹರ್ಟ್ಝ್) ಪ್ರಸಾರವಾಗಲಿದೆ. ಬಿಡುವು ಮಾಡಿಕೊಂಡು ಕೇಳಿ.

RELATED ARTICLES
- Advertisment -
Google search engine

Most Popular

Recent Comments