Thursday, November 30, 2023
Homeದೇಶತ್ಯಾಜ್ಯದಿಂದ ಸಂಪತ್ತು: ಕಲ್ಲಿದ್ದಲಿನ ತ್ಯಾಜ್ಯದಿಂದ ಮರಳು ತಯಾರಿಕೆ

ತ್ಯಾಜ್ಯದಿಂದ ಸಂಪತ್ತು: ಕಲ್ಲಿದ್ದಲಿನ ತ್ಯಾಜ್ಯದಿಂದ ಮರಳು ತಯಾರಿಕೆ

ಕಲ್ಲಿದ್ದಲು ಸಚಿವಾಲಯದಡಿ ಬರುವ ಕಲ್ಲಿದ್ದಲು ಮತ್ತು ಲಿಗ್ನೈಟ್ ಸಾರ್ವಜನಿಕ ವಲಯದ ಉದ್ದಿಮೆಗಳಿಂದ ವಿನೂತನ ಉಪಕ್ರಮ

ಕಲ್ಲಿದ್ದಲು ಸಚಿವಾಲಯದ ಮಾರ್ಗದರ್ಶನದಲ್ಲಿ ಕಲ್ಲಿದ್ದಲು/ಲಿಗ್ನೈಟ್ ಅನ್ನು ತನ್ನ ಗ್ರಾಹಕರಿಗೆ ಉತ್ಪಾದಿಸುವುದು ಕಲ್ಲಿದ್ದಲು ಮತ್ತು ಲಿಗ್ನೈಟ್ ಸಾರ್ವಜನಿಕ ವಲಯದ ಉದ್ದಿಮೆಗಳ (ಪಿಎಸ್ ಯುಗಳ) ಕಡ್ಡಾಯ ಕಾರ್ಯವಾಗಿದ್ದರೂ ಸಹ ಅವು ತಮ್ಮ ಚೌಕಟ್ಟಿನಿಂದಾಚೆ ಉಪಕ್ರಮ ಕೈಗೊಂಡು ಕಲ್ಲಿದ್ದಲು ಉಪ ಉತ್ಪನ್ನ (ಓವರ್ ಬರ್ಡನ್) ನಿಂದ ಕಡಿಮೆ ಬೆಲೆಯಲ್ಲಿ ಮರಳನ್ನು ಉತ್ಪಾದಿಸುತ್ತಿವೆ. ಈ ಉಪಕ್ರಮ ಮೀತಿಮೀರಿದ ಮರಳು ಮಣ್ಣಿನಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಗ್ಗಿಸಲು ಸಹಾಯ ಮಾಡುವುದಲ್ಲದೆ, ನಿರ್ಮಾಣ ಉದ್ದೇಶಕ್ಕೆ ಅಗ್ಗದ ದರದಲ್ಲಿ ಮರಳನ್ನು ಪಡೆಯುವ ಆಯ್ಕೆಯನ್ನು ಒದಗಿಸುತದೆ. ಕಲ್ಲಿದ್ದಲು ಪಿಎಸ್ ಯುಗಳಲ್ಲಿ ಮರಳು ಉತ್ಪಾದನೆ ಈಗಾಗಲೇ ಆರಂಭವಾಗಿದೆ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್), ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ (ಎನ್ ಎಲ್ ಸಿಐಎಲ್ ) ಮತ್ತು ಸಿಂಗರೇಣಿ ಕೋಲಿರೀಸ್ ಕಂಪನಿ ಲಿಮಿಟೆಡ್ (ಎಸ್ ಸಿಸಿಎಲ್) ನಿಂದ ಗರಿಷ್ಠ ಮರಳು ಉತ್ಪಾದನೆಯನ್ನು ಮಾಡಲು ಮುಂದಿನ 5 ವರ್ಷಗಳಿಗೆ ನೀಲನಕ್ಷೆಯೂ ಸಿದ್ಧವಾಗಿದೆ.
ಕಲ್ಲಿದ್ದಲನ್ನು ಹೊರತೆಗೆಯುವಾಗ ಓವರ್‌ ಬರ್ಡನ್ ಎಂದು ಕರೆಯಲ್ಪಡುವ ಗಮನಾರ್ಹ ಉಪ-ಉತ್ಪನ್ನದೊಂದಿಗೆ ಬರುತ್ತದೆ. ಕಲ್ಲಿದ್ದಲಿನ ಓಪನ್‌ಕಾಸ್ಟ್ ಗಣಿಗಾರಿಕೆಯ ಸಮಯದಲ್ಲಿ, ಕಲ್ಲಿದ್ದಲಿನ ಸೀಮ್‌ನ ಮೇಲಿರುವ ಸ್ತರಗಳನ್ನು ಜೇಡಿಮಣ್ಣು, ಮೆಕ್ಕಲು ಮರಳು ಮತ್ತು ಶ್ರೀಮಂತ ಸಿಲಿಕಾ ಅಂಶದೊಂದಿಗೆ ಮರಳುಗಲ್ಲುಗಳನ್ನು ಒಳಗೊಂಡಿರುವ ಓವರ್ ಬರ್ಡನ್ ಎಂದು ಕರೆಯಲಾಗುತ್ತದೆ. ಕೆಳಗಿನಿಂದ ಕಲ್ಲಿದ್ದಲನ್ನು ಹೊರತೆಗೆಯುವಾಗ ಮಿತಿಮೀರಿದ ಹೊರೆ (ಓವರ್ ಬರ್ಡನ್ ) ಅನ್ನು ತೆಗೆದುಹಾಕಲಾಗುತ್ತದೆ. ನಂತರ, ಕಲ್ಲಿದ್ದಲು ಹೊರತೆಗೆಯುವಿಕೆ ಪೂರ್ಣಗೊಂಡ ನಂತರ, ಅದರ ಮೂಲ ಆಕಾರದಲ್ಲಿ ಭೂಮಿಯನ್ನು ಮರುಪಡೆಯಲು ಹಿಂಬದಿ ತುಂಬಲು ಓವರ್‌ಬರ್ಡನ್ ಅನ್ನು ಬಳಸಲಾಗುತ್ತದೆ. ಮೇಲಿನಿಂದ ಹೊರೆಯನ್ನು ಹೊರತೆಗೆಯುವಾಗ, ಪರಿಮಾಣದ ಸ್ವೆಲ್ ಅಂಶವು ಶೇ 20 ರಿಂದ 25 ರಷ್ಟಿರುತ್ತದೆ. ಈ ಹೊರೆಯನ್ನು ಸಾಂಪ್ರದಾಯಿಕವಾಗಿ ತ್ಯಾಜ್ಯ ಅಥವಾ ಬರ್ಡನ್ ಎಂದು ಪರಿಗಣಿಸಲಾಗುತ್ತದೆ ಮತ್ತು ಅದರ ಸಂಭವನೀಯ ಮೌಲ್ಯವನ್ನು ಗುರುತಿಸದೆ ಸಾಮಾನ್ಯವಾಗಿ ರದ್ದಿಗೆ ಹಾಕಲಾಗುತ್ತದೆ. ಆದರೂ ಸುಸ್ಥಿರ ಅಭ್ಯಾಸಗಳು ಮತ್ತು ಆರ್ಥಿಕತೆ ಚಲಾವಣೆಯ ಮೇಲೆ ಹೆಚ್ಚಿನ ಗಮನ ಹರಿಸುವುದರೊಂದಿಗೆ ಓವರ್ ಬರ್ಡನ್ ಅನ್ನು ಪರ್ಯಾಯ ಬಳಕೆಗಳನ್ನು ಅನ್ವೇಷಿಸುವ ನಿಟ್ಟಿನಲ್ಲಿ ಒಂದು ಬದಲಾವಣೆ ಕೈಗೊಳ್ಳಲಾಗಿದ್ದು,ಅದನ್ನು ತ್ಯಾಜ್ಯದಿಂದ ಸಂಪತ್ತಿಗೆ ಪರಿವರ್ತಿಸಲಾಗುತ್ತಿದೆ.

ಮೊದಲ ಉಪಕ್ರಮ
ಸಿಐಎಲ್ ನ ಅಂಗಸಂಸ್ಥೆ, ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಡಬ್ಲೂಸಿಎಲ್ ) 2016-17 ರಲ್ಲಿ ತನ್ನ ಗಣಿಯಲ್ಲಿ ಅಂತಹ ಒಂದು ಪರಿವರ್ತನಾತ್ಮಕ ಮೊದಲ ವಾಣಿಜ್ಯ ಉಪಕ್ರಮವನ್ನು ಕೈಗೊಂಡಿತು. ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಭನೇಗಾಂವ್ ಗಣಿಯಲ್ಲಿ ಪ್ರಾಯೋಗಿಕ ಯೋಜನೆಯನ್ನು ಆರಂಭಿಸಲಾಗಿತ್ತು, ಅಲ್ಲಿ ಇಲಾಖೆಯಿಂದ ಸ್ಥಾಪಿಸಲಾದ ಯಂತ್ರಗಳ ಮೂಲಕ ಮರಳು ತೆಗೆಯಲಾಯಿತು. ಈ ಯಂತ್ರದ ಸಾಮರ್ಥ್ಯವು ದಿನಕ್ಕೆ 300 ಘನ ಮೀಟರ್ ಆಗಿತ್ತು. ಹೀಗೆ ತೆಗೆದ ಮರಳನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಅಂತಿಮವಾಗಿ ನದಿಪಾತ್ರದ ಮರಳಿಗಿಂತ ಉತ್ತಮವೆಂದು ಕಂಡುಬಂದಿದೆ. ಬೆಲೆಯು ಪ್ರತಿ ಘನ ಮೀಟರ್‌ಗೆ 160 ರೂ.ಗಳಷ್ಟಿತ್ತು, ಇದು ಅಂದಿನ ಮಾರುಕಟ್ಟೆ ಬೆಲೆಯ ಸುಮಾರು ಶೇ.10 ರಷ್ಟಾಗಿತ್ತು. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ಕಡಿಮೆ ವೆಚ್ಚದ ಮನೆಗಳನ್ನು ನಿರ್ಮಿಸಲು ಈ ಮರಳನ್ನು ನಾಗ್ಪುರ ಸುಧಾರಣಾ ಟ್ರಸ್ಟ್‌ಗೆ ನೀಡಲಾಯಿತು. ಇಲಾಖೆಯ ಇನ್ನೂ ಎರಡು ಸಾಧನಗಳನ್ನು ನಿಯೋಜಿಸಲಾಗಿತ್ತು.
ಪ್ರಾಯೋಗಿಕ ಯೋಜನೆಯ ಯಶಸ್ಸಿನ ಮೇಲೆ, ಡಬ್ಲೂಸಿಎಲ್ ನಾಗ್ಪುರ ಸಮೀಪದ ಗೊಂಡೆಗಾಂವ್ ಗಣಿಯಲ್ಲಿ ದೇಶದ ಅತಿದೊಡ್ಡ ಮರಳು ಉತ್ಪಾದನಾ ಘಟಕವನ್ನು ನಿಯೋಜಿಸುವ ಮೂಲಕ ಮರಳಿನ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸಿತು. ಈ ಘಟಕವು ಮಾರುಕಟ್ಟೆ ಬೆಲೆಯ ಅರ್ಧದಷ್ಟು ದರದಲ್ಲಿ ದಿನಕ್ಕೆ 2500 ಘನ ಮೀಟರ್ ಮರಳನ್ನು ಉತ್ಪಾದಿಸುತ್ತದೆ.

ಸರ್ಕಾರದ ಘಟಕಗಳು ಮತ್ತು ಸ್ಥಳೀಯ ಮಾರಾಟಕ್ಕೆ ಪಾಲುದಾರಿಕೆ

ನಾಗ್ಪುರದ ಅತಿದೊಡ್ಡ ಮರಳು ಉತ್ಪಾದನಾ ಘಟಕದಿಂದ ಉತ್ಪಾದಿಸಲಾದ ಮರಳಿನ ಪ್ರಮುಖ ಭಾಗವನ್ನು ಮಾರುಕಟ್ಟೆ ಬೆಲೆಯ ಮೂರನೇ ಒಂದರಷ್ಟಕ್ಕೆ ಎನ್ ಎಚ್ ಎಐ, ಎಂಒಐಎಲ್, ಮಹಾ ಜನ್ಕೋ ಮತ್ತಿತರ ಸಣ್ಣ ಘಟಕಗಳಳಿಗೆ ನೀಡಲಾಗುತ್ತಿದೆ. ಉಳಿದ ಮರಳನ್ನು ಮಾರುಕಟ್ಟೆಯಲ್ಲಿ ಬಹಿರಂಗ ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯರಿಗೆ ಕಡಿಮೆ ಬೆಲೆಗೆ ಮರಳು ಸಿಗುವಂತಾಗಿದೆ.

ತ್ಯಾಜ್ಯದಿಂದ ಸಂಪತ್ತು: ಮಹತ್ವದ ಬದಲಾವಣೆ

ಒಂದು ಕಾಲದಲ್ಲಿ ತ್ಯಾಜ್ಯ ವಸ್ತು ಎಂದು ಪರಿಗಣಿಸಲ್ಪಟ್ಟ ಓವರ್‌ ಬರ್ಡನ್ ಈಗ ಅಮೂಲ್ಯವಾದ ಸಂಪನ್ಮೂಲವಾಗಿ ಗುರುತಿಸಲ್ಪಟ್ಟಿದೆ. ಮರಳು ಸಂಸ್ಕರಣಾ ಘಟಕಗಳು ಅಪಾರ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ, ಏಕೆಂದರೆ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನಾ ಘಟಕದಲ್ಲಿ ಮಾತ್ರವಲ್ಲದೆ ಟ್ರಕ್‌ಗಳ ಮೂಲಕ ಗ್ರಾಹಕರಿಗೆ ಮರಳನ್ನು ಲೋಡ್ ಮಾಡುವುದು ಮತ್ತು ಸರಬರಾಜು ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಸ್ತರಣಾ ಯೋಜನೆಗಳು ಮತ್ತು ಸಮಾಜದ ಮೇಲೆ ಪರಿಣಾಮ

ಈ ಸಕಾರಾತ್ಮಕ ದೃಷ್ಟಿಕೋನದ ಭಾಗವಾಗಿ ಮತ್ತು ಕಲ್ಲಿದ್ದಲು ತ್ಯಾಜ್ಯದ ಪರ್ಯಾಯ ಬಳಕೆಯ ಅನ್ವೇಷಣೆಯ ಭಾಗವಾಗಿ, ಸಿಐಎಲ್ ದೇಶದ ಪೂರ್ವ ಮತ್ತು ಮಧ್ಯ ಭಾಗದಲ್ಲಿ ತನ್ನ ಅಂಗ ಸಂಸ್ಥೆಗಳಲ್ಲಿ ಹಲವು ಓವರ್‌ಬರ್ಡನ್ ಸಂಸ್ಕರಣಾ ಘಟಕಗಳು ಮತ್ತು ಮರಳು ಉತ್ಪಾದನಾ ಘಟಕಗಳನ ಕಾರ್ಯಾಚರಣೆ ಆರಂಭಿಸಿದೆ.
ಈ ಸುಸ್ಥಿರ ಪ್ರಯತ್ನದ ಭಾಗವಾಗಿ, ಕಲ್ಲಿದ್ದಲು ಪಿಎಸ್ ಯುಗಳಲ್ಲಿ ಈಗಾಗಲೇ ಒಂಬತ್ತು ಓವರ್‌ಬರ್ಡನ್‌ ನಿಂದ ಮರಳು ಉತ್ಪಾದನೆ/ಸಂಸ್ಕರಣಾ ಘಟಕಗಳಿದ್ದು, ಅವುಗಳಲ್ಲಿ ನಾಲ್ಕು ಎಸ್ ಸಿಸಿಎಲ್ ನಲ್ಲಿ, ಮೂರು ಡಬ್ಲೂಸಿಎಲ್ ನಲ್ಲಿ ಮತ್ತು ಎನ್ ಸಿಎಲ್ ಮತ್ತು ಇಸಿಎಲ್ ನಲ್ಲಿ ತಲಾ ಒಂದು ಘಟಕಗಳಿವೆ. ಈ ಮರಳು ಉತ್ಪಾದನೆ/ಸಂಸ್ಕರಣಾ ಘಟಕಗಳ ಒಟ್ಟು ವಾರ್ಷಿಕ ಸಾಮರ್ಥ್ಯವು ಸುಮಾರು 5.5 ಮಿಲಿಯನ್ ಕ್ಯೂಬಿಕ್ ಮೀಟರ್ ಆಗಿದೆ. ಅಲ್ಲದೆ, ನಾಲ್ಕು ಓವರ್‌ಬರ್ಡನ್‌ನಿಂದ ಮರಳು ಸ್ಥಾವರಗಳು ಸಿಐಎಲ್‌ನ ವಿವಿಧ ಅಂಗಸಂಸ್ಥೆಗಳಲ್ಲಿ ಟೆಂಡರ್‌ ಪ್ರಕ್ರಿಯೆಯ ನಾನಾ ಹಂತಗಳಲ್ಲಿವೆ. ಲಿಗ್ನೈಟ್ ಉತ್ಪಾದನಾ ಕಂಪನಿ ಎನ್ ಎಲ್ ಸಿಐಎಲ್ ಸಹ ಎರಡು ಮರಳು ಉತ್ಪಾದನಾ ಘಟಕಗಳನ್ನು ಆರಂಭಿಸುತ್ತಿದೆ. ಈ ಎಲ್ಲಾ ಹೊಸ ಮುಂಬರುವ ಸ್ಥಾವರಗಳು ವಾರ್ಷಿಕ ಸುಮಾರು 1.5 ಮಿಲಿಯನ್ ಘನ ಮೀಟರ್‌ಗಳ ಒಟ್ಟು ಮರಳು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿವೆ.

ಮುಂದಿನ ಹಾದಿ
ಈ ಮಹತ್ವದ ಉಪಕ್ರಮಗಳ ಮೂಲಕ, ಕಲ್ಲಿದ್ದಲು/ಲಿಗ್ನೈಟ್ ಪಿಎಸ್ ಯುಗಳು ಮರಳು ಉತ್ಪಾದನೆ ಮತ್ತು ಬಳಕೆಗೆ ಪರಿಣಾಮಕಾರಿ ವಿಧಾನವನ್ನು ಮುನ್ನಡೆಸುತ್ತಿವೆ, ಪರಿಸರ ಸುಸ್ಥಿರತೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೂ ಕೊಡುಗೆ ನೀಡುತ್ತಿವೆ. ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು/ಲಿಗ್ನೈಟ್ ಪಿಎಸ್‌ಯುಗಳನ್ನು ಕೈಗೆಟುಕುವ ಬೆಲೆಯಲ್ಲಿ ಓವರ್‌ಬರ್ಡನ್‌ನಿಂದ ಹೆಚ್ಚಿನ ಎಂ-ಸ್ಯಾಂಡ್ ಉತ್ಪಾದಿಸಲು ಈ ಚೌಕಟ್ಟಿನಿಂದಾಚೆ ಆಲೋಚಿಸುವ ಉಪಕ್ರಮವನ್ನು ಆರಂಭಿಸಲು ಪ್ರೋತ್ಸಾಹಿಸುತ್ತಿದೆ.
ತಂತ್ರಜ್ಞಾನದ ಪ್ರಗತಿ ಮತ್ತು ನಮ್ಮ ದೇಶದ ವಿವಿಧ ಸ್ಥಳಗಳಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಮರಳಿನ ಬೃಹತ್ ಪ್ರಮಾಣದ ಉತ್ಪಾದನೆಯೊಂದಿಗೆ, ಪ್ರತಿ ಘನ ಮೀಟರ್ ಮರಳಿನ ಬೆಲೆ ಗಣನೀಯವಾಗಿ ತಗ್ಗಲಿದೆ. ಇದು ನಿರ್ಮಾಣ ಉದ್ದೇಶಕ್ಕಾಗಿ ಸಾಮಾನ್ಯ ಜನರಿಗೆ ಕೈಗೆಟುಕುವ ಮರಳನ್ನು ಹೊಂದಲು ಸಹಾಯ ಮಾಡುತ್ತದೆ. ಜತೆಗೆ ಇದು ನದಿಪಾತ್ರದ ಮರಳಿನ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪರಿಸರಕ್ಕೆ ಲಾಭದಾಯಕವಾಗಿದೆ.

– ರಾಜೀವ್ ಆರ್ . ಮಿಶ್ರಾ, ನಿವೃತ್ತ ಅದ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ವೆಸ್ಟರ್ನ್ ಕೋಲ್ ಪೀಲ್ಡ್ಸ್ ಲಿಮಿಟೆಡ್

ನಾಗ್ಪುರ ಬಳಿಯ ಡಬ್ಲ್ಯುಸಿಎಲ್‌ನ ಗೊಂಡೆಗಾಂವ್ ಓಪನ್‌ಕಾಸ್ಟ್ ಕಲ್ಲಿದ್ದಲು ಗಣಿಯಲ್ಲಿ ಭಾರತದ ಮರಳು ಉತ್ಪಾದನಾ ಘಟಕ

ಡಬ್ಲೂಸಿಎಲ್ ನ ಬಲ್ಲಾರ್ ಪುರ್ ಪ್ರದೇಶದಲ್ಲಿ ಮರಳು ವಿಂಗಡಣೆ ಮತ್ತು ಸಂಸ್ಕರಣಾ ಘಟಕ

ಎಸ್ ಸಿಸಿಎಲ್ ನ ಶ್ರೀರಾಮಪುರ ಒಸಿ ಗಣಿಗಾರಿಕೆ ಪ್ರದೇಶದಲ್ಲಿ ಓವರಗ್ ಬರ್ಡನ್ ಸಂಸ್ಕರಿಸಿ ಮರಳು ತಯಾರಿಸುತ್ತಿರುವುದು.

RELATED ARTICLES
- Advertisment -
Google search engine

Most Popular

Recent Comments