Thursday, November 30, 2023
Homeದೇಶಮಣಿಪುರ ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಡಿಎಸ್ಎಸ್ ಮನವಿ ಸಲ್ಲಿಕೆ

ಮಣಿಪುರ ಸರ್ಕಾರ ವಜಾಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳಿಗೆ ಡಿಎಸ್ಎಸ್ ಮನವಿ ಸಲ್ಲಿಕೆ

ನಗರದ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ದಲಿತ ಸಂಘರ್ಷ ಸಮಿತಿ ಹಾಗೂ ಆರ್ ಪಿಐ ಮು ಖಂಡರು ಹಾಗೂ ಕಾರ್ಯಕರ್ತರು ರಾಜ್ಯಾಧ್ಯಕ್ಷರಾದ ದಾದಾಸಾಹೇಬ್ ಎನ್, ಮೂರ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ರಾಜ್ಯಾಧ್ಯಕ್ಷ ಎನ್ ಮೂರ್ತಿ ಅವರು ಮಣಿಪುರ ರಾಜ್ಯದಲ್ಲಿ ಕಳೆದೆರೆಡು ತಿಂಗಳಿನಿಂದ ಜನಾಂಗೀಯ ದಳ್ಳುರಿ ಧಗ ಧಗಧಗ ಹೊತ್ತಿ ಉರಿಯುತ್ತಿದೆ. ಎರಡು ಬುಡಕಟ್ಟು ಆದಿವಾಸಿ ಜಾತಿ ಜನಾಂಗಗಳ ಮಧ್ಯೆ ಗಲಾಟೆಗಳು ನಡೆದು 160 ಕ್ಕೂ ಹೆಚ್ಚಿನ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಮಾನವ ಕುಲಕ್ಕೆ ಕಳಂಕ ತರುವ ಕೆಲಸ ನಡೆದಿದೆ. ಸಾವಿರಾರು ಕುಟುಂಬಗಳ ಆಸ್ತಿ ಪಾಸ್ತಿ ಹಾನಿಯುಂಟಾಗಿದೆ 6000 ಸಾವಿರಕ್ಕೂ ಹೆಚ್ಚಿನ ಜನರ ಮೇಲೆ ಕೇಸ್ ಗಳು ದಾಖಲಾಗಿವೆ. ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಆರ್ ಎಸ್ ಎಸ್ ಸಂಘ ಪರಿವಾರದ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮಣಿಪುರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವು ಒಂದು ಸಮುದಾಯದ ಓಲೈಕೆಗಾಗಿ ಇನ್ನೊಂದು ಸಮುದಾಯದ ವಿರುದ್ಧ ತಾರತಮ್ಯ ಮಾಡಿ ಕೋಮು ಸಾಮರಸ್ಯ ಹಾಳುಮಾಡುತ್ತಿದೆ. ಇದನ್ನು ವಿರೋಧಿಸಿ ಇಂದು ಮೆರವಣಿಗೆ ಮೂಲಕ ರಾಜ್ಯಪಾಲರ ಮೂಲಕ ಪ್ರಧಾನಿ ಗಳಿಗೆ ಹಾಗೂ ರಾಷ್ಟ್ರಪತೀಯವರಿಗೆ ಮನವಿ ಸಲ್ಲಿಕೆ ಮಾಡಲಾಯಿತು. ಕೂಡಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಣಿಪುರ ಸರ್ಕಾರ ವಜಾ ಮಾಡಬೇಕು ಹಾಗೂ ರಾಜ್ಯಪಾಲ ಆಡಳಿತ ಹೇರಬೇಕು.ಮತ್ತು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಮಣಿಪುರದಲ್ಲಿ ಶಾಂತಿ ಕಾಪಾಡಲು ಕ್ರಮ ಕೈಗೊಳ್ಳುವ ಮೂಲಕ ಹೆಣ್ಣುಮಕ್ಕಳ ಬೆತ್ತಲೆ ಮಾಡಿ ಅವಮಾನ ಮಾಡಿದ ಅಪರಾಧಿಗಳಿಗೆ ಶಿಕ್ಷೆ ಆಗಬೇಕು. ಇದಾಗದಿದ್ದಲ್ಲಿ ದೆಹಲಿ ಚಲೋ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಡಿ ಎಸ್ ಎಸ್ ರಾಜ್ಯಾಧ್ಯಕ್ಷ ಎನ್ ಮೂರ್ತಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular

Recent Comments