ಅತ್ಯಂತ ಪ್ರೀಮಿಯಂ ವಿನ್ಯಾಸದ ಮೋಟೊ ಜಿ14 ಬಿಡುಗಡೆ, ಇಮ್ಮರ್ಸಿವ್ 6.5″ ಎಫ್‌ಎಚ್‌ಡಿ+ ಡಿಸ್‌ಪ್ಲೇ, ಸ್ಟೀರಿಯೋ ಸ್ಪೀಕರ್ , ಡಾಲ್ಬಿ ಆಟ್ಮೋಸ್ ಮತ್ತು ಅತ್ಯಂತ ಪರಿಣಾಮಕಾರಿ ಬೆಲೆ ರೂ. 9249*
ಹುಬ್ಬಳ್ಳಿ: ಭಾರತದ ಅತ್ಯುತ್ತಮ 5ಜಿ ಸ್ಮಾರ್ಟ್ಫೋನ್ ಬ್ರಾö್ಯಂಡ್ ಮೊಟೊರೊಲಾ ಇಂದು ತನ್ನ ಜಿ ಸಿರೀಸ್ ಫ್ರಾಂಚೈಸಿಯಲ್ಲಿ ಮೋಟೋ ಜಿ14 ಎಂಬ ಆರಂಭಿಕ ಮಟ್ಟದ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಅತ್ಯಂತ ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ, ಅತ್ಯಂತ ತೆಳ್ಳನೆಯ ಮತ್ತು ಹಗುರವಾದ ಸ್ಮಾರ್ಟ್ಫೋನ್ ಎಲ್ಲರ ಕಣ್ಣರಳಿಸಲಿದೆ ಎಂಬುದು ಸ್ಪಷ್ಟ. ಹಿಂಬದಿಯ ಪ್ಯಾನೆಲ್ ಅನ್ನು ಆಕರ್ಷಕ ಅಕ್ರಿಲಿಕ್ ಗ್ಲಾಸ್ ಸಾಮಗ್ರಿಯಿಂದ ಮಾಡಲಾಗಿದ್ದು, (ಪಿಎಂಎAಎ) ಈ ಸ್ಮಾರ್ಟ್ಫೋನ್ ಈ ಸೆಗ್ಮೆಂಟ್‌ನಲ್ಲೇ ವಿಶಿಷ್ಟವಾಗಿರಲಿದೆ. ಸೆಗ್ಮೆಂಟ್‌ನಲ್ಲೇ ಪ್ರಥಮವಾಗಿ ವೀಗನ್ ಲೆದರ್ ಫಿನಿಶ್‌ನಲ್ಲಿ ಮುಂದಿನ ತಿಂಗಳುಗಳಲ್ಲಿ ಲಭ್ಯವಿರಲಿದೆ.
ಅದ್ಭುತ 16.5 ಸೆಂ.ಮೀ (6.5″) ಫುಲ್ ಎಚ್‌ಡಿ+ ಡಿಸ್‌ಪ್ಲೇ ಹೊಂದಿರುವ ಇದು, ಅತ್ಯಂತ ಸ್ಪಷ್ಟತೆಯಿಂದ ಚಿತ್ರವನ್ನು ತೋರಿಸುತ್ತದೆ ಮತ್ತು ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಸುಂದರ ಚಿತ್ರಗಳನ್ನು ಬಳಕೆದಾರರು ಅನುಭವಿಸಬಹುದು. ಹೈ ಡೆಫಿನಿಶನ್‌ಗೆ ಹೊಸ ವ್ಯಾಖ್ಯಾನವನ್ನು ಮೋಟೀ ಜಿ14 ನೀಡುತ್ತದೆ. ಇದು 20:9 ಅನುಪಾತವನ್ನು ಹೊಂದಿದೆ. ಪಂಚ್ ಹೋಲ್ ವಿನ್ಯಾಸವನ್ನು ಹೊಂದಿದ್ದು, ಅತ್ಯಂತ ತೆಳ್ಳನೆಯ ಬೆಝೆಲ್‌ಗಳಿವೆ. ಇದರಿಂದ ಕೆಲಸ ಮಾಡಲು ಮತ್ತು ಆಟವಾಡಲು ಹೆಚ್ಚು ಸ್ಥಳಾವಕಾಶ ಸಿಕ್ಕಿದಮತಾಗಿದೆ. ಕಣ ್ಣಗೆ ಇದು ಹಿತವಾಗಿದ್ದು, ಸ್ಕಿçÃನ್ ಅನ್ನು ಆಂಬರ್ ಆಗಿ ಪರಿವರ್ತನೆ ಮಾಡುವ ನೈಟ್ ಲೈಟ್ ಇದರಲ್ಲಿದೆ. ಇದರಿಂದಾಗಿ ಕಡಿಮೆ ಬೆಳಕಿದ್ದಾಗ ಸ್ಕಿçÃನ್ ನೋಡುವುದು ಆಹ್ಲಾದಕರವಾಗಿರುತ್ತದೆ. ಅದ್ಭುತ ಡಿಸ್‌ಪ್ಲೇ ಜೊತೆಗೆ, ಅದ್ಭುತ ಸ್ಪೀಕರ್‌ಗಳು ಹೊರಡಿಸುವ ಧ್ವನಿಯಲ್ಲಿ ಮುಳುಗಿಹೋಗುವುದಕ್ಕೆ ಬಳಕೆದಾರರಿಗೆ ಹೊಸ ಆಡಿಟರಿ ಆಯಾಮವನ್ನು ನೀಡುತ್ತದೆ. ಡಾಲ್ಬಿ ಆಟ್ಮೋಸ್ ಅನ್ನು ಹೊಂದಿರುವ ಸ್ಟೀರಿಯೋ ಸ್ಪೀಕರ್‌ಗಳು ಒಟ್ಟಾರೆ ಧ್ವನಿ ಅನುಭವವನ್ನು ಸುಧಾರಿಸುತ್ತವೆ. ಮೋಟೋ ಸ್ಪಾಶಿಯಲ್ ಸೌಂಡ್‌ನಲ್ಲಿ ಆಡಿಯೋ ಔಟ್‌ಪುಟ್ ಇನ್ನಷ್ಟು ಇಮ್ಮರ್ಸಿವ್ ಮತ್ತು ಭರ್ತಿಯಾದ ಭಾವವನ್ನು ನೀಡುತ್ತದೆ.
ಸ್ಮಾರ್ಟ್ಫೋನ್‌ನಲ್ಲಿ ಅತ್ಯಂತ ಶಕ್ತಿಯುತ ಯುಎನ್‌ಐಎಸ್‌ಒಸಿ ಟಿ616 ಒಕ್ಟಾ ಕೋರ್ ಪ್ರೊಸೆಸರ್ ಇದೆ. 4ಜಿ ರ‍್ಯಾಮ್ ಇದ್ದು, ಮೋಟೋ ಜಿ14 ಬೇಕಾದ ಪವರ್ ನೀಡುತ್ತದೆ. ಅತ್ಯಂತ ಸರಾಗ ಅನುಭವವನ್ನು ನೀಡಲು ವಿನ್ಯಾಸ ಮಾಡಿದ 4ಜಿ ಎಲ್‌ಪಿಡಿಡಿಆಋ4ಎಕ್ಸ್ ರ‍್ಯಾಮ್ ಪ್ರತಿ ಟಚ್, ಟ್ಯಾಪ್ ಮತ್ತು ಸ್ವೆöÊಪ್‌ಗೂ ಫೋನ್ ತಕ್ಷಣವೇ ಪ್ರತಿಕ್ರಿಯಿಸುವಂತಾಗುತ್ತದೆ. ಇದು ದೊಡ್ಡ 128 ಜಿಬಿ ಸ್ಟೊರೇಜ್ ಅನ್ನು ಹೊಂದಿದ್ದು, ಈ ಸೆಗ್ಮೆಂಟ್‌ನಲ್ಲೇ ಪ್ರಮುಖ ಯುಎಫ್‌ಎಸ್ 2.2 ತಂತ್ರಜ್ಞಾನವನ್ನು ಅಳವಡಿಸಿಕೊಂಡು, ವೇಗವಾದ ರೀಡ್ ಮತ್ತು ರೈಟ್ ಸೌಲಭ್ಯವನ್ನು ನೀಡುತ್ತದೆ. ಇನ್ನಷ್ಟು ಸ್ಪೇಸ್ ಬೇಕು ಎನ್ನುವವರಿಗೆ ಸ್ಮಾರ್ಟ್ಫೋನ್‌ನಲ್ಲಿ ಪ್ರತ್ಯೇಕ ಮೈಕ್ರೋ ಎಸ್‌ಡಿ ಸ್ಲಾಟ್ ಇದೆ. ಇದು 1 ಟಿಬಿ ವರೆಗೆ ಸ್ಟೊರೇಜ್ ವಿಸ್ತರಿಸಬಲ್ಲದು ಮತ್ತು ಎರಡು ಸಿಮ್ ಸ್ಲಾಟ್‌ಗಳೂ ಇದರಲ್ಲಿವೆ.
ಅಷ್ಟೇ ಅಲ್ಲ, ಮೋಟೋ ಜಿ14 ಯಲ್ಲಿ ಅತ್ಯಂತ ಶಕ್ತಿಯುತ 5000 ಎಂಎಎಚ್ ಬ್ಯಾಟರಿ ಇದೆ. ಇದು ವೇಗವಾಗಿ ಚಾರ್ಜ್ ಆಗುತ್ತದೆ. ಇದಕ್ಕಾಗಿ 20 ವ್ಯಾಟ್ ಟೈಪ್ ಸಿ ಟರ್ಬೋಪವರ್ ಚಾರ್ಜರ್ ಇದೆ.
ಬಿಡುಗಡೆಯ ಬಗ್ಗೆ ಮಾತನಾಡಿದ ಮೋಟೋರೋಲಾ ಏಷ್ಯಾ ಪೆಸಿಫಿಕ್‌ನ ಕರ‍್ಯನಿರ್ವಾಹಕ ನಿರ್ದೇಶಕ ಪ್ರಶಾಂತ್ ಮಣ “ಜಿ ಸಿರೀಸ್‌ನಲ್ಲಿ ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ನಮಗೆ ಅಪಾರ ಖುಷಿಯೆನಿಸುತ್ತಿದೆ. ನಮ್ಮ ಜಿ ಸಿರೀಸ್ ಸ್ಮಾರ್ಟ್ಫೋನ್‌ಗಳ ಮೂಲಕ ನಾವು ಪ್ರೀಮಿಯಂ ಸ್ಮಾರ್ಟ್ಫೋನ್ ಅನುಭವವನ್ನು ಒದಗಿಸುತ್ತಿದ್ದೇವೆ. ಇದರಲ್ಲಿ ಕೈಗೆಟಕುವ ದರದಲ್ಲಿ ಸುಧಾರತಿ ವೈಶಿಷ್ಟö್ಯಗಳನ್ನು ಒದಗಿಸುತ್ತಿದ್ದು, ಭಾರತೀಯ ಮೊಬೈಲ್ ಫೋನ್ ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತಿದ್ದೇವೆ. ಈ ಭರವಸೆಗೆ ಪೂರಕವಾಗಿ ಮೋಟೋ ಜಿ14 ಈ ಸೆಗ್ಮೆಂಟ್‌ನಲ್ಲೇ ಪ್ರಮುಖವಾದ, ಪ್ರೀಮಿಯಂ ಡಿಸೈನ್ ಅನ್ನು ಹೊಂದಿದೆ ಮತ್ತು ಅತ್ಯಂತ ಉತ್ತಮ ಇಮ್ಮರ್ಸಿವ್ ಮನರಂಜನೆ ಅನುಭವವನ್ನು ನೀಡುತ್ತದೆ. ಈ ಪ್ರಾಡಕ್ಟ್ ಹೊಸ ಮಾನದಂಡಗಳನ್ನು ಕೈಗೆಟಕುವ ಸೆಗ್ಮೆಂಟ್‌ನಲ್ಲಿ ರೂಪಿಸುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ” ಎಂದಿದ್ದಾರೆ.
ಇದರಲ್ಲಿ ಅದ್ಭುತ ಕ್ಯಾಮೆರಾ ಇದ್ದು, ಈ ವಿಷಯದಲ್ಲಿ ಗ್ರಾಹಕರನ್ನು ಮೋಟೋ ಜಿ14 ನಿರಾಸೆ ಮೂಡಿಸುವುದಿಲ್ಲ. ಇದರಲ್ಲಿ ಡ್ಯೂಯೆಲ್ ಕ್ಯಾಮೆರಾ ಸೆಟಪ್ ಇದೆ. 50 ಎಂಪಿ ಪ್ರೆöÊಮರಿ ಕ್ಯಾಮೆರಾ ಇದ್ದು, ಇದರಲ್ಲಿ ಕ್ವಾಡ್ ಪಿಕ್ಸೆಲ್ ಟೆಕ್ನಾಲಜಿ ಇದೆ. ಇದರಿಂದ 4 ಪಟ್ಟು ಉತ್ತಮ ಲೋ ಲೈಟ್ ಸೆನ್ಸಿಟಿವಿಟಿಯನ್ನು ಪಡೆಯಬಹುದು ಹಾಗೂ ಹೆಚ್ಚು ಪ್ರಕಾಶಮಾನವಾದ ಫೋಟೋಗಳನ್ನು ಸೆರೆಹಿಡಿಯಬಹುದು. ಪ್ರತ್ಯೇಕ ಮ್ಯಾಕ್ರೋ ವಿಷನ್ ಕ್ಯಾಮೆರಾ ಇದ್ದು, ಸ್ಟಾಂಡರ್ಡ್ ಲೆನ್ಸ್ ಸೆರೆಹಿಡಿಯಲು ವಿಫಲವಾಗುವ ಎಲ್ಲ ಸಣ್ಣ ಸಂಗತಿಗಳನ್ನೂ ಇದು ಸೆರೆಹಿಡಿಯುತ್ತದೆ. ಮುಂಭಾಗದಲ್ಲಿ 8 ಎಂಪಿ ಸೆನ್ಸರ್ ಇದ್ದು, ಸುಂದರ ಮತ್ತು ಪಿಕ್ಚರ್ ಪರ್ಫೆಕ್ಟ್ ಸೆಲ್ಫಿಗಳು ಮತ್ತು ವೀಡಿಯೋಗಳನ್ನು ಸೆರೆಹಿಡಿಯಬಹುದು.
ಇದರ ಜೊತೆಗೆ, ಮೋಟೋ ಜಿ14 ಐಪಿ52 ರೇಟೆಡ್ ವಾಟರ್ ರಿಪೆಲ್ಲೆಂಟ್ ಡಿಸೈನ್ ಅನ್ನು ಹೊಂದಿದ್ದು, ಬದಿಯಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್‌ಲಾಕ್, ಡ್ಯೂಯೆಲ್ ಬ್ಯಾಂಡ್ ವೈಫೈ ಇದೆ. ಅಲ್ಲದೆ, ನಿಮ್ಮ ಮೆಚ್ಚಿನ ಮೋಟೋ ಜೆಶ್ಚರ್‌ಗಳೂ ಇವೆ. ಇತ್ತೀಚಿನ ಆಂಡ್ರಾಯ್ಡ್ 13 ಅನ್ನು ಹೊಂದಿದ್ದು, ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್ ಮಾಡುವ ಖಾತರಿ ನೀಡುತ್ತದೆ. ಅಲ್ಲದೆ, 3 ವರ್ಷಗಳ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನೂ ಒದಗಿಸುತ್ತದೆ.