ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ವೆಂಕಟೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭ

0
5

 

ಚಿಕ್ಕಬಳ್ಳಾಪುರ : ಭಾರತೀಯ ಅಂಚೆ ಇಲಾಖೆ ಚಿಕ್ಕಬಳ್ಳಾಪುರ ಕೇಂದ್ರ ಕಛೇರಿಯ ಕೋಲಾರ ವಿಭಾಗದಲ್ಲಿ ಹಿರಿಯ ಅಂಚೆ ಅಧಿಕಾರಿ ವೆಂಕಟೇಶ್.ಎಬಿಎಂ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಇಲಾಖೆಯ ಸಿಬ್ಬಂದಿಯೂ ನಿವೃತ್ತರಾದ ವೆಂಕಟೇಶ್ ಅವರಿಗೆ ಹಾರ,ಶಾಲು ,ಮೈಸೂರು ಪೇಟ ತೊಡಿಸಿ ಅತ್ಯಂತ ಆತ್ಮೀಯತೆಯಿಂದ ಸನ್ಮಾನಿಸಿ ಬೀಳ್ಕೊಟ್ಟರು.

ನಿವೃತ್ತರಾದ ವೆಂಕಟೇಶ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ತಾನು ಈ ಇಲಾಖೆಯಲ್ಲಿ 25ವರ್ಷಗಳ ಕಾಲ ನಿಷ್ಠೆಯಿಂದ,ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತೇನೆ.
ವೃತ್ತಿ ಜೀವನದ ಅಮೂಲ್ಯ ಸಮಯವನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಸರ್ಕಾರಿ ಕೆಲಸವನ್ನು ಅತ್ಯಂತ ಹೆಮ್ಮೆಯ ಕೆಲಸವೆಂದು ಭಾವಿಸಿ ,ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ ತೃಪ್ತಿ ನನಗೆ ಇದೆ
ಇಲಾಖೆಯ ಸಿಬ್ಬಂದಿಯೂ ಸಹ ನನಗೆ ಬಹಳ ಸಹಕಾರವನ್ನು ನೀಡಿರುತ್ತಾರೆಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ಜೆ.ಎನ್.ಮಂಜುನಾಥ್,ಅಂಚೆ ನಿರೀಕ್ಷಕರಾದ ಶಶಿಕುಮಾರ್ ಶೆಟ್ಟಿಗೆರೆ,ಕಾರ್ಯದರ್ಶಿ ರಾಮಪ್ಪ, ಐಪಿಬಿಪಿ ವ್ಯವಸ್ಥಾಪಕರಾದ ಬಾಲಸುಬ್ರಮಣ್ಯಂ,ಸಂತೋಷ .ಆರ್.,ಕೃಷ್ಣ ನಾಯಕ್,ಜಿ.ಎಸ್.ಬಾಲಕೃಷ್ಣ,ಚೆಲುವ ಮೂರ್ತಿ,ನಿವೃತ್ತ ಅಂಚೆ ಪಾಲಕರಾದ ಮೈಸೂರು ನಾಗರಾಜ್,ನಂದಿನಿ ,ಅಂಚೆ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.