Thursday, November 30, 2023
Homeದೇಶಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶಿಕ್ಷಕರು ಜವಾಬ್ದಾರಿ ಬಹಳ ಗುರುತರವಾದದ್ದು: ಕೆ.ಎಮ್ ರಾಜಣ್ಣ

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶಿಕ್ಷಕರು ಜವಾಬ್ದಾರಿ ಬಹಳ ಗುರುತರವಾದದ್ದು: ಕೆ.ಎಮ್ ರಾಜಣ್ಣ

ತಿಪಟೂರು: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶಿಕ್ಷಕರು ಜವಾಬ್ದಾರಿ ಬಹಳ ಗುರುತರವಾಗಿದ್ದು, ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಮಹತ್ವದ್ದಾಗಿದೆ ಎಂದು ತಾಲ್ಲೂಕು ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಎಮ್ ರಾಜಣ್ಣ ತಿಳಿಸಿದರು.

ನಗರದ ಕೌಸ್ತುಭ ಹೋಟೆಲ್ ಸಭಾಂಗಣದಲ್ಲಿ ಆಯೋಜನೆ ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ ವತಿಯಿಂದ ವರ್ಗಾವಣೆಗೊಂಡ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಇಂದಿನ ಶಿಕ್ಷಕರು ವೃತ್ತಿಯ ಜೊತೆಗೆ ಹತ್ತಾರು ಹಣಕಾಸಿನ ವ್ಯವಹಾರಗಳ ಜೊತೆ ಸಂಬಂಧವನ್ನು ಇಟ್ಟುಗೊಂಡು ಮೂಲ ವೃತ್ತಿಯಾದ ಶಿಕ್ಷಕನ ಪಾತ್ರವನ್ನು ಮರೆತಾಗ ಇದರಿಂದ ಶಿಕ್ಷಣದ ಗುಣಮಟ್ಟ ಕುಂಠಿತಗೊಳ್ಳುತ್ತದೆ, ಶಿಕ್ಷಕರಾದವರಿಗೆ ನೈತಿಕ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕಾಗಿರುತ್ತದೆ. ಇಂತಹ ವೃತ್ತಿಯಲ್ಲಿ ಪ್ರಾಮಾಣಿಕತೆ ನಿ?ಯಿಂದ ಮಕ್ಕಳಿಗೆ ನ್ಯಾಯಯುತವಾಗಿ ಮಾರ್ಗದರ್ಶನ ನೀಡಿದಾಗ ಶಿಕ್ಷಕ ವೃತ್ತಿಯು ಪಾವಿತ್ರತ್ಯೆಯಿಂದ ಉಳಿಯುತ್ತದೆ ಎಂದರು

ವರ್ಗಾವಣೆಗೊಂಡ ಶಿಕ್ಷಕರಾದ ಮುರಳಿ ಮಾತನಾಡಿ ತಿಪಟೂರು ನಗರವು ಸಾಹಿತ್ಯವಾಗಿ ಸಾಂಸ್ಕೃತಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ದೊಡ್ಡಮಟ್ಟದಲ್ಲಿ ಬೆಳೆದಿದ್ದು ಇಂತಹ ಕಲ್ಪವೃಕ್ಷ ನಾಡಿನಲ್ಲಿ ಸುಧೀರ್ಘವಾಗಿ ೧೨ ವ?ಗಳ ಕಾಲ ಶಿಕ್ಷಕನಾಗಿ ಸಾವಿರಾರು ಮಕ್ಕಳಿಗೆ ಜ್ಞಾನವನ್ನು ತುಂಬಲು ಅವಕಾಶ ಮಾಡಿಕೊಟ್ಟಂತ ಶಿಕ್ಷಣ ಇಲಾಖೆಗೆ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು ನನ್ನ ಶಿಕ್ಷಕ ವೃತ್ತಿ ಬದುಕಿನಲ್ಲಿ ಮಕ್ಕಳಲ್ಲಿ ದೇವರಾಗಿ ಕಂಡಿದ್ದೇನೆ ಎಲ್ಲರೂ ಮಹತ್ವವಾಗಿದೆ ಈ ವೃತ್ತಿಯಿಂದ ನನಗೆ ಆತ್ಮ ತೃಪ್ತಿ ತಂದು ಕೊಟ್ಟಿದೆ

ಸನ್ಮಾನ ಸ್ವೀಕರಿಸಿದ ಸಹ ಶಿಕ್ಷಕರಾದ ಸಂತೋ? ಮಾತನಾಡಿ ಶಿಕ್ಷಕ ವೃತ್ತಿಯೂ ಆಕಸ್ಮಿಕವಾಗಿ ದೊರೆತಿದ್ದಲ್ಲ ಕ?ಪಟ್ಟು ಇ?ಪಟ್ಟು ಬಂದಿದ್ದೇನೆ ಈ ವೃತ್ತಿಯಲ್ಲಿ ಆತ್ಮ ಗೌರವ ಮತ್ತು ಆತ್ಮ ತೃಪ್ತಿಯು ಸಿಕ್ಕಿದೆ, ವೃತ್ತಿಗಳಲ್ಲಿ ಶಿಕ್ಷಣ ವೃತ್ತಿಯು ಉತ್ತಮವಾಗಿದ್ದು ಭವಿ?ದ ಭಾರತಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವಂತಹ ಮಹತ್ವದ ಕರ್ತವ್ಯವನ್ನು ನಾವು ನಿಭಾಯಿಸಿದ್ದು ಪ್ರತಿನಿತ್ಯ ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಅಂಶಗಳ ಮೂಲಕ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವಂತ ಕೆಲಸ ಶಿಕ್ಷಣದ ಅಂಶವಾಗಿದೆ ಅಂತಹ ಶಿಕ್ಷಕನಾಗಿ ಕಾರ್ಯನಿರ್ವಹಿಸುವಂತಹ ಅವಕಾಶ ಕೊಟ್ಟಿರುವಂತಹ ತಾಲೂಕಿಗೆ ನಾವು ಯಾವಾಗಲೂ ಸಹ ಚಿರ ಋಣಿಗಳಾಗಿರುತ್ತೇವೆ ಎಂದು ತಿಳಿಸಿದರು

ಸಂಘದ ಪ್ರಧಾನ ಕಾರ್ಯದರ್ಶಿ ಭಾನುಪ್ರಶಾಂತ್ ಮಾತನಾಡಿ ಸಂಘವು ಸಾಮಾಜಿಕ ಸೇವಾ ಚಟುವಟಿಕೆಗಳಿಂದ ಕೂಡಿದ್ದು ಸಮಾಜದ ಕಟ್ಟ ಕಡೆಯ ಮನು?ನಿಂದ ಸಂಘದ ಸೇವೆ ಮಾಡುವ ಸರ್ವರಿಗೂ ಸನ್ಮಾನಿಸುವುದು ಪರಸ್ಪರ ಗೌರವಿಸುವುದು ಸಂಘದ ಮೂಲ ಉದ್ದೇಶವಾಗಿದೆ. ಶಿಕ್ಷಕರಾಗಿ ಜನಮನ್ನಣೆಗಳಿಸುವುದು ಇಂದಿನ ಪ್ರಸ್ತುತದಲ್ಲಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ತಾಲ್ಲೂಕಿನ ದಶಕಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿರುವ ಇಬ್ಬರು ಶಿಕ್ಷಕರ ಕರ್ತವ್ಯ ಮಹತ್ವಪೂರ್ಣ ಹಾಗೂ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ನಾಗರಾಜ್, ಡಾ.,ವೆಂಕಟೇಶ್, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಕುಮಾರಸ್ವಾಮಿ, ಪ್ರಾಂಶುಪಾಲರಾದ ಚೆನ್ನೇಗೌಡರು, ಸ್ವಾಮಿ, ಸದಣ್ಣಹಳೇಪಾಳ್ಯ, ಕೀರ್ತಿ, ಸತ್ಯನಾರಯಣ್, ಬಾಬು, ಸರ್ವೇಶಚಾರ್ ಮುಂತಾದವರು ಹಾಜರಿದ್ದರು

ಹಿಂದಿನ ಕಾಲದಲ್ಲಿ ಶಿಕ್ಷಕರು ವರ್ಗಾವಣೆ ಅಥವಾ ನಿವೃತ್ತಿ ಹೊಂದಿದರೆ ಆ ಶಾಲೆ-ಗ್ರಾಮಗಳಲ್ಲಿ ಒಂದು ರೀತಿಯ ಸೂತಕದ ವಾತವರಣಗಳು ಸೃಷ್ಟಿಯಾಗುತ್ತಿದ್ದವು ಅಲ್ಲಿ ಮಕ್ಕಳು-ಪೋಷಕರು ಹಾಗೂ ಶಿಕ್ಷಕರ ಮಧ್ಯೆ ಉತ್ತಮ ಬಾಂಧವ್ಯಗಳು ಮೂಡಿರುತ್ತಿದ್ದವು ಇಂತಹ ಸನ್ನಿವೇಶಗಳು ಕಣ್ಮರೆಯಾಗುತ್ತಿರುವುದು ಶೋಚನೀಯ.
ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ
ಬಾನುಪ್ರಶಾಂತ್. ಪ್ರಧಾನ ಕಾರ್ಯದರ್ಶಿ. ಬಯಲು ಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘ

RELATED ARTICLES
- Advertisment -
Google search engine

Most Popular

Recent Comments