ಬೆಂಗಳೂರು: ಶ್ರೀ ಮುನಿಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘದ ವತಿಯಿಂದ ರಾಜ್ಯ ಮಟ್ಚದ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ಘಟಕದ ಉದ್ಘಾಟನೆ ಹಾಗೂ ಮಡಿವಾಳ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ. ಮಡಿವಾಳ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಿವಯೋಗಾನಂದಪುರಿ ಮಹಾಸ್ವಾಮೀಜಿರವರು, ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷರಾದ ಪಿ.ನಂಜಪ್ಪ,ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಲೋಕಸೇವಾ ಆಯೋಗದ ಸದಸ್ಯರಾದ ಡಾ.ರವಿಕುಮಾರ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಅಧ್ಯಕ್ಷರಾದ ಪಿ.ನಂಜಪ್ಪರವರು ಮಾತನಾಡಿ ಮಡಿವಾಳ ಸಮಾಜ ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬಹಳ ಹಿಂದೆ ಉಳಿದಿದೆ. ಮಡಿವಾಳ ಸಮಾಜ ರಾಜ್ಯದಲ್ಲಿ 30ಲಕ್ಷ ಜನರು ಇದ್ದಾರೆ .ಮಡಿವಾಳ ಸಮಾಜ ಆರ್ಥಿಕವಾಗಿ ,ಸಾಮಾಜಿಕವಾಗಿ ಹಿಂದುಳಿದಿದ್ದಾರೆ .ಅದ್ದರಿಂದ ನಮ್ಮ ಮಡಿವಾಳ ಸಮಾಜವನ್ನು ಎಸ್.ಸಿ.ಸೇರಿಸಬೇಕು ಎಂದು ನಮ್ಮ ಉದ್ದೇಶ.
ಕಾಂಗ್ರೆಸ್ ,ಬಿಜೆಪಿ ,ಜೆಡಿಎಸ್ ಪಕ್ಷದಲ್ಲಿ ಇರುವ ಮಡಿವಾಳ ಸಮಾಜದ ಮುಖಂಡರುಗಳು ಮತ್ತು ಸಮಾಜದ ಮುಖಂಡರುಗಳ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಡಿವಾಳ ಸಮಾಜವನ್ನು ಎಸ್.ಸಿ. ಸೇರಿಸಿ ಎಂದು ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಬಿ.ಆರ್.ಪ್ರಕಾಶ್ ರವರು ಮಾತನಾಡಿ ಮಡಿವಾಳ ಸಮಾಜವನ್ನು ಅನ್ನಪೂರ್ಣವರದಿ ಮತ್ತು ಕುಲಶಾಸ್ತ್ರ ಅಧ್ಯಯನವನ್ನು 2010ರಲ್ಲಿ ಮಾಡಲಾಗಿದೆ 13ವರ್ಷ ಕಳೆದರು ಮಡಿವಾಳ ಸಮಾಜವನ್ನು ಮೀಸಲಾತಿ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ.ಮಡಿವಾಳ ಸಮಾಜಕ್ಕೆ ಶಿಕ್ಷಣ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಅತಿಹೆಚ್ಚು ಅಂಕಗಳಿಸಿದ 400ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಮಡಿವಾಳ ಸಮಾಜದ ಸಾಧಕರಾದ ಲೋಕಸೇವಾ ಆಯೋಗದ ಸದಸ್ಯರಾದ ಡಾ.ರವಿಕುಮಾರ್, ಕೆ.ಸಿ.ಜನರಲ್ ಆಸ್ಪತ್ರೆಯ ಧಪೇದಾರರಾದ ಹೆಚ್.ಸಿ.ರಾಜು, ಖ್ಯಾತ ಸಂಗೀತಗಾರ್ತಿ ಶ್ರೀಮತಿ ಹೆಚ್.ಎಸ್.ಉಷಾರವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.



ಕರ್ನಾಟಕ ರಾಜ್ಯ ಮಡಿವಾಳರ ಸಂಘದ ವತಿಯಿಂದ ರಾಜ್ಯ ಮಟ್ಚದ ಪ್ರತಿಭಾ ಪುರಸ್ಕಾರ ಮತ್ತು ಮಹಿಳಾ ಘಟಕದ ಉದ್ಘಾಟನೆ ಹಾಗೂ ಮಡಿವಾಳ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭ.ಮಡಿವಾಳ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಿವಯೋಗಾನಂದಪುರಿ ಮಹಾಸ್ವಾಮೀಜಿರವರು, ಕರ್ನಾಟಕ ರಾಜ್ಯ ಮಡಿವಾಳರ ಸಂಘದ ಅಧ್ಯಕ್ಷರಾದ ಪಿ.ನಂಜಪ್ಪ,ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಲೋಕಸೇವಾ ಆಯೋಗದ ಸದಸ್ಯರಾದ ಡಾ.ರವಿಕುಮಾರ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.