ಕನ್ನಡ ಚಿತ್ರರಂಗದ ಕುಮಾರ ತ್ರಯರಲ್ಲಿ ( ಕಲ್ಯಾಣ್ ಕುಮಾರ್, ರಾಜ್ ಕುಮಾರ್ ಹಾಗೂ ಉದಯ್ ಕುಮಾರ್ ) ಒಬ್ಬರಾದ ಕಲ್ಯಾಣ್ ಕುಮಾರ್ ಅವರ ಹುಟ್ಟು ಹಬ್ಬ.
ಅಮರ ಶಿಲ್ಪಿ ಜಕಣಾಚಾರಿ ಚಿತ್ರದ ಒಂದು ತುಣುಕನ್ನು ನೋಡಬಹುದು.
ಅಂದಿನ ಮುಖ್ಯಮಂತ್ರಿ ಸಿದ್ಧವನಹಳ್ಳಿ ನಿಜಲಿಂಗಪ್ಪ ಅವರಿಂದ ಅಮರ ಶಿಲ್ಪಿ ಜಕಣಾಚಾರಿ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಕಲ್ಯಾಣ್ ಕುಮಾರ್ ಅವರಿಗೆ ಸನ್ಮಾನ. ಸಚಿವ ಬಿ. ರಾಚಯ್ಯ ಹಾಗೂ ಚಿತ್ರದ ನಾಯಕಿ ಬಿ. ಸರೋಜಾದೇವಿ ಅವರನ್ನೂ ಚಿತ್ರದಲ್ಲಿ ಕಾಣಬಹುದು.
ಜೂನ್ 28, 1928 ರಂದು ಜನಿಸಿದ ಕಲ್ಯಾಣ್ ಕುಮಾರ್ ಅವರು ನಟ ಶೇಖರ ಚಿತ್ರದ ಮೂಲಕ 1954 ರಲ್ಲಿ ಚಿತ್ರರಂಗ ಪ್ರವೇಶಿಸಿದರು.
ಕನ್ನಡ ಭಾಷೆಯಲ್ಲಿ 1964 ರಲ್ಲಿ ತೆರೆ ಕಂಡ ಮೊದಲ ವರ್ಣ ಚಿತ್ರ ಅಮರ ಶಿಲ್ಪಿ ಜಕಣಾಚಾರಿ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ ಕೀರ್ತಿಗೆ ಪಾತ್ರರಾದರು.
ಕನ್ನಡ ಮತ್ತು ತಮಿಳೂ ಒಳಗೊಂಡಂತೆ ಎರಡು ನೂರಕ್ಕೂ ಚಿತ್ರಗಳಲ್ಲಿ ಅಭಿನಯಿಸಿರುವ ಕಲ್ಯಾಣ್ ಕುಮಾರ್ ಆಗಸ್ಟ್ 1, 1999 ರಲ್ಲಿ ಇಹಲೋಕ ತ್ಯಜಿಸಿದರು.
ಛಾಯಾಚಿತ್ರಗಳು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಛಾಯಾಚಿತ್ರ ಭಂಡಾರ