ಬೆಂಗಳೂರು; ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನಿರ್ದೇಶಕರಾಗಿ ಖ್ಯಾತ ಶಿಕ್ಷಣ ತಜ್ಞ ಪ್ರೊಫೆಸರ್ ಗಣೇಶ್ ಕನ್ನಬಿರನ್ ಅವರನ್ನು ನೇಮಿಸಲಾಗಿದೆ. ಪ್ರೊಫೆಸರ್ ಗಣೇಶ್ ಕನ್ನಬಿರನ್ ಅವರು 2023 ರ ಜುಲೈ 28 ರಂದು ಪದಗ್ರಹಣ ಮಾಡಿದರು.
ಪ್ರೊಫೆಸರ್ ಕನ್ನಬಿರೇನ್ ಅವರು ತಿರುಚರಪಲ್ಲಿಯ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಹಿರಿಯ ಪ್ರಾಧ್ಯಾಪಕರು ಮತ್ತು ಮಾಜಿ ವಿದ್ಯಾರ್ಥಿ. ಅಧ್ಯಾಪನೆ, ಸಂಶೋಧನೆ ಮತ್ತು ಆಡಳಿತ ವ್ಯವಸ್ಥೆಯಲ್ಲಿ 30 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಅವರು ತಿರುಚ್ಚಿಯ ಎನ್.ಐ.ಟಿಯಲ್ಲಿ ಸಂಶೋಧನೆ ಮತ್ತು ಸಮಾಲೋಚನಾ ವಿಭಾಗದ ಡೀನ್ ಮತ್ತು ಉಸ್ತುವಾರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಆಂಧ್ರಪ್ರದೇಶದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ರಾಷ್ಟ್ರೀಯ ಮಹತ್ವದ ಸಂಸ್ಥೆ) ಸಂಸ್ಥಾಪಕ ನಿರ್ದೇಶಕರಾಗಿ 2018 ರಿಂದ 2023 ರ ವರೆಗೆ ಜವಾಬ್ದಾರಿ ನಿರ್ವಹಣೆ ಮಾಡಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ – ಎನ್.ಇ.ಪಿ 2020 ರಡಿ ಕೌಶಲ್ಯಾಭಿವೃದ್ಧಿ, ಸಮಗ್ರ ಶಿಕ್ಷಣ, ಎಲ್ಲರನ್ನೊಳಗೊಂಡ ಶಿಕ್ಷಣ, ಸಾಲ ವರ್ಗಾವಣೆ ಮತ್ತಿತರೆ ವಿಷಯಗಳನ್ನು ಶಿಕ್ಷಣ ವ್ಯವಸ್ಥೆಗೆ ಸೇರ್ಪಡೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು, ಅತ್ಯುನ್ನತ ಗುಣಮಟ್ಟದ ಬೋಧಕ ಸಿಬ್ಬಂದಿಯನ್ನು ಸೆಳೆಯುವ, ತಮ್ಮಲ್ಲೇ ಉಳಿಸಿಕೊಳ್ಳುವ ಜೊತೆಗೆ ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ಉತ್ತೇಜನ, ಉನ್ನತ್ ಭಾರತ್ ಅಭಿಯಾನದಡಿ ಆಸುಪಾಸಿನ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಮತ್ತು ಕೈಗಾರಿಕಾ ವಲಯದಲ್ಲಿ ಬಹು ಹಂತಗಳಲ್ಲಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ಅವರು ಅತ್ಯುತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ. ಪುದುಚೇರಿಯ ಎನ್.ಐ.ಟಿ ಉಸ್ತುವಾರಿ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಡಾ. ಕನ್ನಬಿರೇನ್ ಅವರು [ಈಡನ್ ಬರ್ಗ್ ನೈಪೆರ್ ವಿಶ್ವವಿದ್ಯಾಲಯ] ಕಾಮನ್ ವೆಲ್ತ್ ಶಿಷ್ಯವೇತನ, ಫುಲ್ ಬ್ರೈಟ್ ಶಿಷ್ಯ ವೇತನ [ಶಿಕ್ಷಣ ಆಡಳಿತ ಕಾರ್ಯಕ್ರಮ, ಓಕಲ್ಹಾಮ್ ರಾಜ್ಯ ವಿಶ್ವವಿದ್ಯಾಲಯದ ಅತಿಥಿ ಭೋದಕ ಸಿಬ್ಬಂದಿ] ಮತ್ತು ಬ್ರಿಟೀಷ್ ಕೌನ್ಸಿಲ್ ಅಧ್ಯಯನ ವಲಯದ ಶಿಷ್ಯ ವೇತನ [ಹುಡ್ಡೇರ್ಸಿಫೀಲ್ಡ್ ವಿಶ್ವವಿದ್ಯಾಲಯ] ಪಡೆದುಕೊಂಡಿದ್ದಾರೆ. ಅಮೆರಿಕ, ಬ್ರಿಟನ್ ಮತ್ತು ಶ್ರೀಲಂಕಾ ಸೇರಿದಂತೆ ಹಲವಾರು ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯ ವಲಯದಲ್ಲೂ ಕೆಲಸ ಮಾಡಿದ್ದಾರೆ. ಉನ್ನತ ಶಿಕ್ಷಣ, ನಾಯಕತ್ವ ಅಭಿವೃದ್ಧಿಪಡಿಸುವ, ಗುಣಮಟ್ಟ ಖಾತರಿ, ಉತ್ಪಾದಕತೆ ಮತ್ತಿತರೆ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಚಟುವಟಿಕೆಗಳಲ್ಲೂ ಅವರು ಭಾಗಿಯಾಗಿದ್ದರು.
ಡಾ. ಕನ್ನಬಿರೇನ್ ಅವರು ವಿಶೇಷವಾಗಿ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರವನ್ನು ಕೇಂದ್ರೀಕರಿಸಿದ್ದಾರೆ. ಈ ಎರಡು ವಲಯಗಳಲ್ಲಿ ಅವರು 8 ಕಂಪೆನಿಗಳ [ತಿರುಚ್ಚಿಯ ಎನ್.ಐ.ಟಿಯ ಸಿಯುಡಿಐ ಮತ್ತು ಶ್ರೀ ಸಿಟಿಯ ಐಐಐಟಿಯಲ್ಲಿ ಗ್ಯಾನ್ ಸರ್ಕಲ್ ವೆಂಚರ್ಸ್ ] ಮೂಲಕ ನೂರಾರು ಮಂದಿಗೆ ಮಹಿಳಾ ಉದ್ದಿಮೆದಾರರನ್ನೊಳೊಂಡಂತೆ ಉದ್ಯಮಶೀಲತೆಯನ್ನು ಅಭಿವೃದ್ಧಿಪಡಿಸಿದ್ದು, ಇವರಿಗೆ ಇನ್ ಕ್ಯೂಬೇಷನ್ ಸೌಲಭ್ಯ, ಮೂಲ ನಿಧಿಯ ಬೆಂಬಲ ಮತ್ತು ಮಾರ್ಗದರ್ಶನ ಮಾಡಿದ್ದಾರೆ. ಮೇಟಿವೈ, ಎಐಸಿಟಿಇ, ಡಿಎಸ್ ಟಿ, ಯುಕೆಐಇಆರ್ ಐ ಮತ್ತು ದಿ ಏಷ್ಯಾ ದಂತಹ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೆರವು ಪಡೆಯುವ ಸಂಸ್ಥೆಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
ಯುನೆಸ್ಕೋ ಮೂಲಕ ಕೈಗಾರಿಕೆ – ಸಾಂಸ್ಥಿಕ ಸಂವಾದ, ಕಂಪ್ಯೂಟರ್ ಆಧಾರಿತ ಕಲಿಕೆ, 4.0 ಕೈಗಾರಿಕೆ, ಉದ್ಯಮಶೀಲತೆ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಪದವಿಧರರರಿಗೆ ಉದ್ಯೋಗಾವಕಾಶಗಳು, ಸಣ್ಣ ಮತ್ತು ಮಧ್ಯಮ ಉದ್ಯಮ – ಎಸ್ಎಂಇ ಅಭಿವೃದ್ಧಿ, ಖಾಸಗಿ ದತ್ತಾಂಶ, ಲಿಂಗ ಸಮಾನತೆ ಮತ್ತು ಐಸಿಟಿ ಶಿಕ್ಷಣ ಮತ್ತಿತರೆ ವಲಯಗಳಲ್ಲಿ ಸುಮಾರು 8 ಕೋಟಿ ರೂಪಾಯಿ ಮೊತ್ತದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.
ತಂತ್ರಾಂಶ ವಲಯದಲ್ಲಿ ತಾಂತ್ರಿಕತೆ, ತಂತ್ರಾಂಶ ಯೋಜನಾ ನಿರ್ವಹಣೆ, ವ್ಯಾಪಾರ ವಿಶ್ಲೇಷಣೆ ಮತ್ತು ಮಾಹಿತಿ ತಂತ್ರಜ್ಞಾನ ಸಮಾಲೋಚನೆ, ಐಸಿಟಿ ಅಭಿವೃದ್ಧಿ, ಕಡಲಾಚೆಯ ಮಾಹಿತಿ ವಿಜ್ಞಾನ, ಜ್ಞಾನ ನಿರ್ವಹಣೆ ಮತ್ತಿತರೆ ವಲಯಗಳಲ್ಲಿ ಅವರು ಆಸಕ್ತಿ ಹೊಂದಿದ್ದಾರೆ.
ಡಾ. ಕನ್ನಬಿರೇನ್ ಅವರು, ಸಣ್ಣ ಮತ್ತು ಮಧ್ಯಮ ಉದ್ಯಮ – ಎಸ್ಎಂಇ ವಲಯದಲ್ಲಿ ಸಂಶೋಧನೆ, ಅಭಿವೃದ್ದಿ ಮತ್ತು ಯೋಜನಾ ಕಾರ್ಯತಂತ್ರ ತಂಡಕ್ಕೆ ಸಾಂಸ್ಥಿಕ ರೂಪ ನೀಡಿದ್ದು, ಈ ಮೂಲಕ ತಿರುಚರಪಲ್ಲಿಯಲ್ಲಿ ಇದು ಮೂಲಾಧಾರಿತ ಪರಿವರ್ತನೆಗೆ ನೆರವು ನೀಡಲಿದೆ. ಭಾರತೀಯ ಯೋಜನಾ ನಿರ್ವಹಣಾ ಸಂಸ್ಥೆಯ ಶೈಕ್ಷಣಿಕ ಸಲಹಾ ಸಮಿತಿ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ ಮತ್ತು ಇಂಡಿಯನ್ ಸೊಸೈಟಿ ಫಾರ್ ಟ್ರೈನಿಂಗ್ ಅಂಡ್ ಡವಲಪ್ಮೆಂಟ್ ಸಂಸ್ಥೆಯ ಸದಸ್ಯರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.
ಡಾ. ಕನ್ನಬಿರೇನ್ ಅವರು ಮಾಹಿತಿ ವ್ಯವಸ್ಥೆಯ ವಿಷಯದಲ್ಲಿ ಪಿ.ಎಚ್.ಡಿ ಮಾಡಿದ್ದು, ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ವ್ಯಾಪಾರ ಆಡಳಿತ ಮತ್ತು ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.