ಕರ್ನಾಟಕ ಬಾಲ ವಿಕಾಸ ಅಕಾಡೆಮಿ ದಾರವಾಡ ಹಾಗೂ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿಭಾಗೀಯ ಮಟ್ಟದ ಬಾಲಮಂದಿರಗಳ ಮಕ್ಕಳಿಗೆ ” ಮಕ್ಕಳ ಕಥಾ ಕಮ್ಮಟ” ವನ್ನು ದಿನಾಂಕ 18-7-2023 ರಿಂದ 24-7-2023 ರವರಿಗೆ ಹಮ್ಮಿಕೊಂಡಿದ್ದು ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ಯೆಪ್ಪ ಡಿ ಸಮಾಜಕಾರ್ಯ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಸಮಾಜಕಾರ್ಯ ಕರ್ತರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ರವರಿಗೆ ಉತ್ತಮ ನಿರ್ವಹಣಾ ಕೌಶಲ್ಯವನ್ನು ಗುರ್ತಿಸಿ “ದಿ ಬೆಸ್ಟ್ ಮೆಂಟರ್ ” ಪ್ರಶಸ್ತಿ ಹಾಗೂ ಸರ್ಕಾರಿ ಬಾಲ ಮಂದಿರದ ತೇಜ ಸಿ.ವಿ ರವರಿಗೆ ಬಹುಮುಖಿ ಪ್ರತಿಭೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದ್ದು ಇವರು ಜಿಲ್ಲೆಗೆ ಉತ್ತಮ ಕೀರ್ತಿತಂದಿದ್ದಾರೆ.
ಸದರಿ ಕಾರ್ಯಕ್ರಮದಲ್ಲಿ ಅಕಾಡೆಮಿಯ ಯೊಜನಾದಿಕಾರಿಗಳಾದ ಶ್ರೀಮತಿ ಭಾರತಿ ಶೆಟ್ಟರ, ಅಕಾಡೆಮಿಯ ಸಂಸ್ಥಾಪಕ ಅದ್ಯಕ್ಷರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶಂಕರ್ ಅಲಗತ್ತಿ, ಶಿಬಿರದ ಯೋಜನಾಧಿಕಾರಿಗಳಾದ ಶ್ರೀ ಗುಂಡುರಾವ್ ದೇಸಾಯಿ, ಶ್ರೀ ಗೋಪಾಲ ಕೃಷ್ಣ ಹೆಗಡೆ ನಿರ್ದೇಸಕರು ಕೆ.ಎಲ್ .ಇ, ಶ್ರೀ ಮುಕ್ಕುಂದ ಮೈಗೂರ್ ಕ್ರೀಯಾಶೀಲ ಗೆಳೆಯರ ಬಳಗ,ಆದೆಪ್ಪ ಹೆಂಬಾ ಮುಖ್ಯ ಶಿಕ್ಷಕರು ಉದ್ವಾಳ, ಕಥಾ ಕಮ್ಮಟ ಶಿಬಿರದಲ್ಲಿ ಭಾಗವಹಿಸಿದ್ದ ಬಾಲಂದಿರಗಳ ಮಕ್ಕಳು ಮತ್ತು ಮೆಂಟರ್ ಗಳು ಹಾಗೂ ಅಕಾಡೆಮಿಯ ಸಿಬ್ಬಂದಿ ಹಾಜರಿದ್ದರು.