ಚಿಕ್ಕಬಳ್ಳಾಪುರ: ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರತಿಯೊಬ್ಬರಿಗೂ ನಂಬಿಕೆ ಇದೆ ಅದನ್ನು ಹುಸಿಗೊಳಿಸಬಾರದು. ಶನಿವಾರ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಎಸ್.ಇಂದ್ರೇಶ್ ಅವರು ಚಿಕ್ಕಬಳ್ಳಾಪುರಕ್ಕೆ ಬೇಟಿ ನೀಡುವ ಬಗ್ಗೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಸಿ ಸಿ ಕ್ಯಾಮೆರಾ ಗಳಿಗೆ ಚಾಲನೆ ನೀಡಿ ಮಾತನಾಡಿದರು.
ಹಳೇ ಮೈಸೂರು ರಾಜ್ಯ ವಿದ್ದ ಕಾಲದಲ್ಲಿ ಇಡೀ ರಾಜ್ಯದ ಎರಡು ಕೋರ್ಟ್ ನಲ್ಲಿಯೂ ವಕಾಲತ್ತು ವಹಿಸುವ ಬರವಣಿಗೆಯಲ್ಲಿ ಮೊದಲು ಶ್ರೀರಂಗಪಟ್ಟಣ ತದನಂತರ ಚಿಕ್ಕಬಳ್ಳಾಪುರ ಜಿಲ್ಲೆಗಳಾಗಿದ್ದು,ಇಂತಹ ಜಿಲ್ಲೆಯಲ್ಲಿ ತಾವು ವಕೀಲ ವೃತ್ತಿಯನ್ನು ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ತಂತ್ರಜ್ನಾನವು ಎಷ್ಟ್ಟೆ ಮುಂದುವರಿದರೂ ಕರಡು ಬರವಣಿಗೆಯ ರೂಪವನ್ನು ಶಬ್ದಕೋಶದಲ್ಲಿನ ಪದಗಳಿಂದ ವಾಕ್ಯಗಳನ್ನು ಕಟ್ಟುವುದು,ಬಳಸುವುದು ಅತ್ಯಂತ ಸೂಕ್ತವಾದುದು ಎಂದರು.
ನಮ್ಮ ನ್ಯಾಯಾಂಗ ವ್ಯವಸ್ಥೆ ಯು ವ್ಯವಸ್ಥಿತ ರೀತಿಯಲ್ಲಿ ಇದ್ದರೆ ಅಂತರ ರಾಷ್ಟ್ರೀಯ ಸಂಬಂಧಗಳು ವುದ್ದಿಯಾಗುತ್ತವೆ. ಇತರ ದೇಶಗಳು ನಮ್ಮೊಂದಿಗೆ ಸಂಬಂಧಗಳನ್ನು ಬೆಳೆಸಲು, ಸಂವಹನ ದೊಂದಿಗೆ ವ್ಯವಹರಿಸಲು ಸಂಪರ್ಕ ಸುಗಮಗೊಳ್ಳುತ್ತದೆ.
ಮಹಾತ್ಮ ಗಾಂಧೀಜಿ ಗಾಂಧೀಜಿಯವರು ಜೋಗ ಜಲಪಾತ ವನ್ನು ನೋಡಿದಾಗ ಏಷ್ಟು ಸುಂದರವಾಗಿದೆ ಎಂದರು,ಅದನ್ನೇ ಕವಿ ಕೆ ಎಸ್ ನಿಸಾರ್ ಅಹಮದ್ ಅವರು ಪದ್ಯವನ್ನು ರಚಿಸಿದರು.ಸರ್.ಎಂ ವಿಶ್ವೇಶ್ವರಯ್ಯ ನೋಡಿ ನೀರು ಏಷ್ಟು ವ್ಯರ್ಥವಾಗುತ್ತಿದೆ ಇದನ್ನು ವಿಧ್ಯುತ್ ಉತ್ಪಾದನೆಗೆ ಬಳಸಿದರೆ ಉಪಯೋಗಿಸಿದರೆ ಉಪಯೋಗವಾಗುತ್ತದೆ ಪ್ರತಿಯೊಬ್ಬರ ದೃಷ್ಟಿಕೋನ ವಿಭಿನ್ನ ರೀತಿಯಲ್ಲಿ ಇರುತ್ತದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ, ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ನ್ಯಾಯಾಲಯಗಳ ಹಿರಿಯ ಹಾಗೂ ಕಿರಿಯ ಗೌರವಾನ್ವಿತ ನ್ಯಾಯಾಧೀಶರುಗಳು, ಚಿಕ್ಕಬಳ್ಳಾಪುರ ಉಪವಿಭಾಗಾ ಧಿಕಾರಿ ಡಿ. ಎಚ್ ಅಶ್ವಿನ್, ತಹಸಿಲ್ದಾರ್ ಗಣಪತಿ ಶಾಸ್ತ್ರಿ, ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್ ಶ್ರೀನಿವಾಸ್, ಹಿರಿಯ ವಕೀಲರಾದ ತಮ್ಮೇಗೌಡ, ಪ್ರಕಾಶ್ ಸೇರಿದಂತೆ ವಕೀಲರ ಸಂಘದ ಜಿಲ್ಲಾ ಮತ್ತು ತಾಲೂಕು ಕೇಂದ್ರ ಸಂಘಗಳ ಎಲ್ಲಾ ಪದಾಧಿಕಾರಿಗಳು, ವಕೀಲರು ಇದ್ದರು.