ಹನಿಗವನಗಳು
ನಮ್ಮೂರಿನ ಮದ್ಯಪ್ರಿಯ
ಮುದ್ದಣ್ಣನ ಛಡಿಯೇಟಿಗೆ
ಮಡದಿ ಮನೋರಮೆ
ಮುನಿದು ಹೊರಟಿಹಳು ತೌರಿಗೆ
ಮುದ್ದಣ್ಣ ದಾಸಪ್ಪನ ಬಾರಿಗೆ
ಈತ ಕುಡಿತ ಬಿಡುವುದಿಲ್ಲ ಖಚಿತ
ಆಕೆಗೆ ಬಸ್ ಪ್ರಯಾಣ ಉಚಿತ
ಭೀಮನ ಅಮಾವಾಸ್ಯೆಗೆ
ಬೆಂದ ಕಾಳೂರಿನ ಪ್ರಕಾಶ್
ಕಳಿಸಿದ್ದಾರೆ ಒಂದು ಮೆಸೇಜ್
ನಿಮ್ಮ ಮಡದಿ ನಿಮಗೆ
ಚೆನ್ನಾಗಿ ಪೂಜೆ ಮಾಡಿದರೇ
ತಿಳಿಸಿ ದಯವಿಟ್ಟು
ಹೌದು ಮಾಡಿದಳು
ಲಟ್ಟಣಿಗೆ ಬದಿಗಿಟ್ಟು..!
ಮದ್ಯ ಕುಡಿದು ಹೋದರೆ
ಹೆಂಡತಿ ರಾತ್ರಿ ಕದ ತೆಗೆಯುವುದಿಲ್ಲ
ಅದಕ್ಕೆ ನಾನು ಕುಡಿಯುವುದಿಲ್ಲ
ಮಧ್ಯಾಹ್ನ ಹೇಳುವುದಿಲ್ಲ
ನಮ್ಮ ಚಳಿಗಾಲದ
ಮಧುಚಂದ್ರ ನಡೆದಿದ್ದು
ಕೊಡೈಕೆನಾಲ್ ಊಟಿ
ನಮಗೀಗ ಮಧು ಭೇಟ
ಚಂದ್ರ ಭೇಟಿ
—
ಗೊರೂರು ಅನಂತರಾಜು
ಹಾಸನ
9449462879