Thursday, November 30, 2023
Homeಇದೀಗ ಬಂದ ತಾಜಾ ಸುದ್ದಿ"ಜ್ಯಾಗರಿ ಅಡ್ಡ" ಎಂಬ ಆರ್ಗ್ಯಾನಿಕ್ ಬೆಲ್ಲದ ಚಹಾ ಹೋಟೆಲ್ ಉದ್ಘಾಟನೆ

“ಜ್ಯಾಗರಿ ಅಡ್ಡ” ಎಂಬ ಆರ್ಗ್ಯಾನಿಕ್ ಬೆಲ್ಲದ ಚಹಾ ಹೋಟೆಲ್ ಉದ್ಘಾಟನೆ

ಮಹಾಲಕ್ಷ್ಮಿ ಲೇಔಟ್ ನ ಕುರುಬರ ಹಳ್ಳಿಯ ಚಾಲುಕ್ಯ ಡಾ, ರಾಜಕುಮಾರ್ ವ್ರತದಲ್ಲಿ ಇಂದು ಯನ್ನು ಸ್ಥಳೀಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ ಗೋಪಾಲಯ್ಯ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕರಾದ ಶಂಕರಲಿಂಗ ಮಾಳಗಿ ಅವರು ಶಾಸಕರಿಗೆ ಶಾಲು ಹೊದಿಸಿ ಹಾರ ಹಾಕಿ ಫಲಪುಷ್ಪ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಸಕರು ಮಾತನಾಡಿ ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ, ಯಾಕಂದ್ರೆ ಈಗ ನಾವು ಸೇವಿಸುವ ಆಹಾರ ಸೇರಿದಂತೆ ಎಲ್ಲವೂ ಕೆಮಿಕಲ್ ಮಿಶ್ರಿತವಾಗಿ ಉತ್ತಮ ಆರೋಗ್ಯ ಹೊಂದುವುದು ಕಷ್ಟವಾಗಿದೆ. ಹಿಂದಿನ ಕಾಲದ ಆಹಾರ ಸೇವನೆ ಬಹಳ ನೈಸರ್ಗಿಕವಾಗಿ ದ್ದರಿಂದ ಆರೋಗ್ಯ ಚೆನ್ನಾಗಿರುತ್ತಿತ್ತು. ಇವತ್ತು ಇವರು ಆರಂಭ ಮಾಡಿರುವ ಆರ್ಗಾನಿಕ್ ಬೆಲ್ಲದ ಚಹಾ ಹೋಟೆಲ್ ತುಂಬಾ ಖುಷಿ ವಿಚಾರ, ಈಗೀಗ ನಗರದಲ್ಲಿ ಜನರು ಆರ್ಗಾನಿಕ್ ವಸ್ತುಗಳನ್ನು ಬಳಸುತ್ತಿರುವುದು ಒಳ್ಳೆಯ ಬೆಳವಣಿಗೆ ಇವರ ಈ ಕಾರ್ಯ ಶ್ಲಾಘನೀಯ ಒಳ್ಳೆಯದಾಗಲಿ ಜನರ ಆರೋಗ್ಯ ದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಗೋಪಾಲಯ್ಯ ಹೇಳಿದ್ರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾದ ಶಿವಾನಂದ್ ತಗಡುರ್, ಪತ್ರಕರ್ತ ಆನಂದ್ ಮಾಳಗಿ, ಚಂದ್ರಶೇಖರ್ ಯಲಬುರ್ತಿ ,ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಾದ ಶಂಭುಲಿಂಗ,ಹಾಗೂ ಕುಟುಂಬ ಸದಸ್ಯರು ಸ್ನೇಹಿತರು ಭಾಗವಹಿಸಿ ನೂತನ ಹೋಟೆಲ್ ಆರಂಭಕ್ಕೆ ಶುಭಕೋರಿದರು.

RELATED ARTICLES
- Advertisment -
Google search engine

Most Popular

Recent Comments