ಬೆಂಗಳೂರು: ಮಕ್ಕಳು ತಮ್ಮ ದಿನಚರಿಯನ್ನು ಹೇಗೆ ಆಯೋಜಿಸಿಕೊಳ್ಳಬೇಕು? ಟಿವಿ ಮೊಬೈಲ್ ಇವುಗಳ ಹಾನಿ ತಡೆಗಟ್ಟಿ ಲಾಭ ಪಡೆಯುವ ಬಗ್ಗೆ ಮತ್ತು ಕಲಿತ ವಿಷಯಗಳನ್ನು ಹೇಗೆ ಕೃತಿಯಲ್ಲಿ ತರಬೇಕು ಎಂಬುದರ ಬಗ್ಗೆ ಶಾಲಾ ಮಕ್ಕಳಿಗೆ ಸೌ. ಸುಮ ಮಂಜೇಶ್ ರವರು ತಿಳಿಸಿದರು. 66 ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು ಇದರ ಲಾಭ ಪಡೆದರು. ಕು.ಪ್ರಭಾವತಿ, ಶ್ರೀ ಅರುಣ್ ಗೌಡ, ಶ್ರೀ ಚೇತನ್ ಮತ್ತು ಸೌ. ಸುನೀತ ಇವರುಗಳ ಉಪಸ್ಥಿತಿಯಿತ್ತು.
ಸೌ. ಸುಮ ಮಂಜೇಶ್ ಇವರು ಮಾತನಾಡುತ್ತಾ ಕುಂಬಾರನು ಮಡಿಕೆ ಮಾಡುವಾಗ ಯಾವ ರೀತಿಯಾಗಿ ಒಳ್ಳೆಯ ಆಕಾರ ನೀಡುತ್ತಾನೆಯೋ ಅದು ಒಣಗಿ ಬೆಂದು ಗಟ್ಟಿಯಾದ ನಂತರ ಸಹ ಅದೇ ರೀತಿ ಒಳ್ಳೆಯ ರೀತಿಯಾಗಿರುತ್ತದೆ. ಹಾಗೆಯೇ ಚಿಕ್ಕಂದಿನಲ್ಲಿ ಯಾವ ರೀತಿ ಒಳ್ಳೆಯ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳುತ್ತೆವೆಯೋ ಅದೇ ರೀತಿ ಬೆಳೆದು ದೊಡ್ಡವರಾದ ಮೇಲೆ ಸುಸಂಸ್ಕಾರ ವ್ಯಕ್ತಿಗಳಾಗಿ ಸತ್ಪ್ರಜೆಗಳಾಗುವೆವು ಎಂಬುದನ್ನು ತಿಳಿಸಿದರು.
ನಾವು ಕಲಿತ ಒಳ್ಳೆಯ ವಿಚಾರಗಳನ್ನು ಕೃತಿಯ ಹಂತದಲ್ಲಿ ತಂದರೆ ಹೇಗೆ ಲಾಭವಾಗುತ್ತದೆ ಎಂಬುದನ್ನು ಪಂಡಿತ ಮತ್ತು ಅಂಬಿಗನ ಕಥೆಯ ಮೂಲಕ ಹೇಳಲಾಯಿತು.
ಮಕ್ಕಳೆಲ್ಲರೂ ಇದನ್ನು ಆಸಕ್ತಿಯಿಂದ ಕೇಳಿಸಿಕೊಂಡರು ಮತ್ತು ಶಿಕ್ಷಕ ವೃಂದದವರು ಮಕ್ಕಳಿಗೆ ಹೇಳಿದ ಪ್ರತಿಯೊಂದು ವಿಷಯದ ಬಗ್ಗೆ ಕೃತಿ ಮಾಡಲು ಸೂಚಿಸಿದರು.
ತಮ್ಮ ವಿಶ್ವಾಸಿ
ಶ್ರೀ. ವಿನೋದ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ (ಸಂಪರ್ಕ : 9342599299)