ನವದೆಹಲಿ: ಗೋಧಿ ಮತ್ತು ಅಕ್ಕಿಯ ಚಿಲ್ಲರೆ ಬೆಲೆಯನ್ನು ನಿಯಂತ್ರಣದಲ್ಲಿಡಲು ಭಾರತೀಯ ಆಹಾರ ನಿಗಮ, ಪ್ರಾದೇಶಿಕ ಕಚೇರಿ, ಬೆಂಗಳೂರು ಸಂಸ್ಥೆಯು ಪ್ರತಿ ಬುಧವಾರದಂದು ಇ-ಹರಾಜಿನ ಮೂಲಕ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ – ದೇಶೀಯ (ಒ.ಎಮ್.ಎಸ್.ಎಸ್.- ದೇಶೀಯ) ಅಡಿಯಲ್ಲಿ ಖಾಸಗಿ ಖರೀದಿದಾರರಿಗೆ ಗೋಧಿ ಮತ್ತು ಅಕ್ಕಿಯನ್ನು ಒದಗಿಸುತ್ತಿದೆ.
ಡಿಸೆಂಬರ್ 31, 2023 ರವರೆಗೆ ದೇಶದಾದ್ಯಂತ ಗೋಧಿಯ ಮೀಸಲು ಬೆಲೆಯನ್ನು ನ್ಯಾಯಯುತ ಮತ್ತು ಸರಾಸರಿ ಗುಣಮಟ್ಟ (ಎಫ್.ಎ.ಕ್ಯು) ವ್ಯವಸ್ಥೆಯಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ 2,150/- ಮತ್ತು ಅಂಡರ್ ರಿಲ್ಯಾಕ್ಸ್ಡ್ ಸ್ಪೆಸಿಫಿಕೇಶನ್ಸ್ (ಯು.ಆರ್.ಎಸ್.) ವಿಧದಲ್ಲಿ ಪ್ರತಿ ಕ್ವಿಂಟಲ್ ಗೆ ರೂ 2,125/- ಎಂದು ನಿಗದಿಪಡಿಸಲಾಗಿದೆ.
ಅಕ್ಟೋಬರ್ 31, 2023 ರವರೆಗೆ ದೇಶದಾದ್ಯಂತ ಅಕ್ಕಿಯ ಮೀಸಲು ಬೆಲೆಯನ್ನು ಪ್ರತಿ ಕ್ವಿಂಟಲ್ ಗೆ ರೂ 3,100/- ಎಂದು ನಿಗದಿಪಡಿಸಲಾಗಿದೆ ಮತ್ತು ಖಾಸಗಿ ಸಂಸ್ಥೆಗಳಿಗೆ ಬಲವರ್ಧಿತ ಅಕ್ಕಿಗೆ (ಫೋರ್ಟಿಫೈಡ್ ರೈಸ್) ಪ್ರತಿ ಕ್ವಿಂಟಲ್ ಗೆ ಮೀಸಲು ರೂ.73/- ಹೆಚ್ಚುವರಿ ಬೆಲೆಯನ್ನು ಸೇರಿಸಲಾಗಿದೆ
28.06.2023, 05.07.2023 ಮತ್ತು 12.07.2023 ರಂದು ನಡೆದ ಇ-ಹರಾಜಿನಲ್ಲಿ 13470 ಎಂ.ಟಿ., 13600 ಎಂ.ಟಿ. ಮತ್ತು 14570 ಎಂ.ಟಿ. ಪ್ರಮಾಣದ ಗೋಧಿಯನ್ನು ಒದಗಿಸಲಾಗಿತ್ತು ಮತ್ತು ಅನುಕ್ರಮವಾಗಿ 3260 ಎಂ.ಟಿ. 3930 ಎಂ.ಟಿ. ಮತ್ತು 5830 ಎಂ.ಟಿ. ಗೋದಿ ಮಾರಾಟವಾಗಿತ್ತು. 28.06.2023 ರಂದು, ಹರಾಜಿನಲ್ಲಿ ನ್ಯಾಯಯುತ ಮತ್ತು ಸರಾಸರಿ ಗುಣಮಟ್ಟದ(ಎಫ್.ಎ.ಕ್ಯು) ಗೋಧಿಯ ದರಗಳ ಶ್ರೇಣಿಯು ರೂ.2150 ರಿಂದ ರೂ.2180 ರ ನಡುವೆ ಇತ್ತು. 05.07.2023 ಮತ್ತು 12.07.2023 ರಂದು, ಮತ್ತು ಸರಾಸರಿ ಗುಣಮಟ್ಟದ(ಎಫ್.ಎ.ಕ್ಯು) ಗೋಧಿಯ ಶ್ರೇಣಿಯ ಬೆಲೆಯು ರೂ.2150 ಆಗಿತ್ತು.
01.07.2023 ರಂತೆ, ಕರ್ನಾಟಕದಲ್ಲಿ 6.49 ಎಲ್.ಎಂ.ಟಿ. ಅಕ್ಕಿ ಮತ್ತು 0.63 ಎಲ್.ಎಂ.ಟಿ. ಗೋಧಿ ಸಂಗ್ರಹಣೆಯಿತ್ತು. ಅಖಿಲ ಭಾರತದ ಮಟ್ಟದಲ್ಲಿ 253.49 ಎಲ್.ಎಂ.ಟಿ. ಅಕ್ಕಿ ಹಾಗೂ 301.45 ಎಲ್.ಎಂ.ಟಿ. ಗೋಧಿ ಸಂಗ್ರಹಣೆಯಿತ್ತು.
ಕರ್ನಾಟಕದ ಶರತ್ಕಾಲದ ಮಾರುಕಟ್ಟೆ (ಕೆ.ಎಂ.ಎಸ್) 2021-22ರಲ್ಲಿ ಕರ್ನಾಟಕವು 9.93 ಎಲ್.ಎಂ.ಟಿ. ರಾಗಿ ಮತ್ತು 1.22 ಎಲ್.ಎಂ.ಟಿ. ಜೋಳವನ್ನು ಉತ್ಪಾದಿಸಿದೆ ಮತ್ತು 4.04 ಎಲ್.ಎಂ.ಟಿ. ರಾಗಿ ಮತ್ತು 1.03 ಎಲ್.ಎಂ.ಟಿ. ಜೋಳವನ್ನು ಸಂಗ್ರಹಿಸಿದೆ. ಕರ್ನಾಟಕದ ಶರತ್ಕಾಲದ ಮಾರುಕಟ್ಟೆ (ಕೆ.ಎಂ.ಎಸ್) 2022-23 ರಲ್ಲಿ 11.54 ಎಲ್.ಎಂ.ಟಿ. ರಾಗಿ ಮತ್ತು 1.76 ಎಲ್.ಎಂ.ಟಿ. ಜೋಳವನ್ನು ಉತ್ಪಾದಿಸಲಾಯಿತು ಮತ್ತು 4.544 ಎಲ್.ಎಂ.ಟಿ. ರಾಗಿ ಮತ್ತು 0.76 ಎಲ್.ಎಂ.ಟಿ. ಜೋಳವನ್ನು ಖರೀದಿಸಿ ಸಂಗ್ರಹಿಸಲಾಗಿದೆ.
ರಾಗಿಯ ಕೊರತೆಯ ರಾಜ್ಯಗಳಿಗೆ ಕರ್ನಾಟಕವು ಪೂರೈಸಿರುವುದು ಇಲ್ಲಿ ಉಲ್ಲೇಖಾರ್ಹ. ಆಂಧ್ರಪ್ರದೇಶಕ್ಕೆ ಸಂಬಂಧಿಸಿದಂತೆ, 17ನೇ ಜುಲೈ 2023 ರವರೆಗೆ, 22,707 ಎಂ.ಟಿ. ಪ್ರಮಾಣದ ರಾಗಿಯನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 991 ಎಂ.ಟಿ. ಪ್ರಮಾಣದ ರಾಗಿಯನ್ನು ಕೇರಳಕ್ಕೆ ಸ್ಥಳಾಂತರಿಸಲಾಗಿದೆ ಮತ್ತು 2639 ಎಂ.ಟಿ. ಪ್ರಮಾಣದ ರಾಗಿಯನ್ನು ತಮಿಳುನಾಡಿಗೆ ಸ್ಥಳಾಂತರಿಸಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ಹಣಕಾಸು ವರ್ಷ 2022-23 ಕ್ಕೆ, ಅಖಿಲ ಭಾರತ ಮಟ್ಟದಲ್ಲಿ 362.53 ಎಲ್.ಎಂ.ಟಿ. ಆಹಾರ ಧಾನ್ಯಗಳ ಹಂಚಿಕೆಯಾಗಿದೆ ಮತ್ತು ಕರ್ನಾಟಕ ರಾಜ್ಯಕ್ಕೆ 2.17 ಎಲ್.ಎಂ.ಟಿ. ಹಂಚಿಕೆಯಾಗಿದೆ. ಜೂನ್ 2023 ರವರೆಗೆ, ಅಖಿಲ ಭಾರತ ಮಟ್ಟದಲ್ಲಿ 371.53 ಎಲ್.ಎಂ.ಟಿ. ಹಂಚಿಕೆಯಾಗಿದೆ ಮತ್ತು ಕರ್ನಾಟಕ ರಾಜ್ಯಕ್ಕೆ ಪ್ರತಿ ತಿಂಗಳು 2.17 ಎಲ್.ಎಂ.ಟಿ. ಹಂಚಿಕೆ ಮಾಡಲಾಗಿದೆ.
ಕಳೆದ ಒಂದು ವರ್ಷದಲ್ಲಿ ಕರ್ನಾಟಕದಲ್ಲಿ ಯಾವುದೇ ಹಾನಿಗೊಳಗಾದ ಆಹಾರ ಧಾನ್ಯಗಳ ದಾಸ್ತಾನು ಸಂಗ್ರಹವಾಗಿಲ್ಲ.
ಕಳೆದ ಒಂದು ವರ್ಷದಿಂದ ವಿವಿಧ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಭಾರತೀಯ ಆಹಾರ ನಿಗಮ(ಎಫ್.ಸಿ.ಐ.)ದ ಕರ್ನಾಟಕ ವಿಭಾಗೀಯ ಕಚೇರಿಗಳ ಅಡಿಯಲ್ಲಿ ಬರುವ ವಿವಿಧ ಡಿಪೋಗಳಿಂದ 1.69 ಎಲ್.ಎಂ.ಟಿ.ಗಳಷ್ಟು ಬಲವರ್ಧಿತ ಅಕ್ಕಿಯನ್ನು ನೀಡಲಾಗಿದೆ.
ಕಳೆದ ಒಂದು ವರ್ಷದಲ್ಲಿ, ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಮತ್ತು ಎಥೆನಾಲ್ ಉತ್ಪಾದನೆಗಾಗಿ 22, 24, 404 ಮೆಟ್ರಿಕ್ ಟನ್ ಗಳಷ್ಟು ನಾನ್-ಫೋರ್ಟಿಫೈಡ್ ಅಕ್ಕಿಯನ್ನು ನೀಡಲಾಗಿದೆ.
2022-23ನೇ ಸಾಲಿನಲ್ಲಿ ಒಟ್ಟು 43.85 ಎಲ್.ಎಂ.ಟಿ. ಆಹಾರಧಾನ್ಯಗಳನ್ನು ರಾಜ್ಯಕ್ಕೆ ಸ್ಥಳಾಂತರಿಸಲಾಗಿದೆ. 2023-24ನೇ ಸಾಲಿನಲ್ಲಿ, ಇದೇ ಜೂನ್ 2023 ರವರೆಗೆ ಒಟ್ಟು 6.03 ಎಲ್.ಎಂ.ಟಿ. ಆಹಾರ ಧಾನ್ಯವನ್ನು ರಾಜ್ಯಕ್ಕೆ ವರ್ಗಾಯಿಸಲಾಗಿದೆ.
ಹಣಕಾಸು 2022-23 ರ ಅವಧಿಯಲ್ಲಿ ಪಡಿತರ (ಸಾರ್ವಜನಿಕ ವಿತರಣಾ ವ್ಯವಸ್ಥೆ) ಫಲಾನುಭವಿಗಳಿಗಾಗಿ ಒಟ್ಟು 0.05 ಎಲ್.ಎಂ.ಟಿ. ಆಹಾರಧಾನ್ಯ ದಾಸ್ತಾನುಗಳನ್ನು ಮಂಗಳೂರು ಬಂದರಿನಿಂದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ದ್ವೀಪಕ್ಕೆ ಹಡಗುಗಳ ಸಾಗರಯಾನ ಮೂಲಕ ಸ್ಥಳಾಂತರಿಸಲಾಗಿದೆ.