ಬೆಂಗಳೂರು: ಬೆಂಗಳೂರು ಮಾಗಡಿ ರಸ್ತೆ ಬಿ.ಇ.ಎಲ್ ಕಾಲೋನಿಯ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಡಾ. ಶಿವರಾಜ್ ಗೌಡರ ತಂಡದ ವೈದ್ಯರು ಹಾಗೂ ಸಿಬ್ಬಂದಿ ಅಂದ್ರಹಳ್ಳಿ ಡಿ ಗ್ರೂಪ್ ನೌಕರರ ಸಂಘ ಬಡಾವಣೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಜುಲೈ 10 ರಂದು ನೆರವೇರಿತು. ಸ್ಥಳೀಯ ಹಲವಾರು ಜನರು ಶಿಬಿರದ ಸೌಲಭ್ಯ ಪಡೆದರು.